
ಸಂಜೆವಾಣಿ ವಾರ್ತೆ
ಹಿರಿಯೂರು: ನ.3-ಹಿರಿಯೂರಿನ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕಿನ ಭೀಮನ ಬಂಡೆ ಶುಭೋದಯ ವೃದ್ಧಾಶ್ರಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಹಣ್ಣು ವಿತರಿಸಲಾಯಿತು. ಕರವೇ ತಾಲೂಕು ಅಧ್ಯಕ್ಷರಾದ ರಾಮಕೃಷ್ಣಪ್ಪ, ಗೌರವಾಧ್ಯಕ್ಷರಾದ ಗೋ.ಬಸವರಾಜ್ ಪ್ರಧಾನ ಕಾರ್ಯದರ್ಶಿ ಡಿ.ಕೆ. ಎಸ್ ದಾದಾಪೀರ್, ನಗರಾಧ್ಯಕ್ಷ ಜಾಕೀರ್, ತಿರುಪತಿ ದಾದಾಪೀರ್, ಸುಹೇಲ್, ಅಸ್ಲಾಂ, ಖಲಂದರ್, ಮತ್ತಿತರರು ಪಾಲ್ಗೊಂಡಿದ್ದರು