ಹಿರಿಯೂರು.ಮಾ.29-ಹಿರಿಯೂರು ಕ್ಷೇತ್ರದ ಮಾಜಿ ಸಚಿವರಾದ ಡಿ. ಸುಧಾಕರ್ ಹುಟ್ಟುಹಬ್ಬವನ್ನು ಭೀಮನಬಂಡೆ ಬಳಿ ಇರುವ ವೃದ್ಧಾಶ್ರಮದ ಹಿರಿಯರೊಂದಿಗೆ ಕೇಕ್ ಕತ್ತರಿಸಿ ಆಚರಿಸಲಾಯಿತು. ಹಾಗೂ ವೃದ್ಧಾಶ್ರಮದಲ್ಲಿ ಭೋಜನ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆ ಅಧ್ಯಕ್ಷರಾದ ಗೀತಾ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಖಾದಿ, ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜನಿ ಯಾದವ್ ಹಾಗೂ ಸದಸ್ಯರುಗಳಾದ ಮಮತ, ಸುಂದರ್ , ರತ್ನಮ್ಮ, ಕವಿತಾ, ಲೋಕೇಶ್,ಸುರೇಖಾ ಮಣಿ ವಿಶಾಲಾಕ್ಷಮ್ಮ ಎಸ್.ಟಿ. ಘಟಕದ ಅಧ್ಯಕ್ಷರಾದ ಗಿರೀಶ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷರಾದ ಶಿವಕುಮಾರ್, ಜ್ಞಾನೇಶ್ ಯಾಸೀನ್ ಗಿರೀಶ್ ಹಾಗೂ ಅನೇಕ ಯುವ ಮುಖಂಡರು ಪಾಲ್ಗೊಂಡಿದ್ದರು.