ವೃದ್ಧಾಶ್ರಮದಲ್ಲಿ ನೂತನ ವರ್ಷಾಚರಣೆ

ಬೀದರ:ಜ.3: 01-01-2021, ಹೊಸ ವರ್ಷದ ಅಂಗವಾಗಿ ಶುಕ್ರವಾರದಂದು ಅನೂಪ ಫೌಂಡೆಷನ್ ವತಿಯಿಂದ ಮಹಾತ್ಮಾ ಜ್ಯೋತಿಭಾ ಫೂಲೆ ವೃದ್ಧಾಶ್ರಮದಲ್ಲಿ ಹೊಸ ವರ್ಷಾಚರಣೆ ಆಚರಿಸಲಾಯಿತು.
ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ ಅವರು ವೃದ್ಧಾಶ್ರಮದಲ್ಲಿ ಕೇಕ್ ಕತ್ತರಿಸಿ ವೃದ್ಧರ ಜೊತೆ ನೂತನ ವರ್ಷವನ್ನು ಸಂಭ್ರಮದಿಂದ ಆಚರಿಸಿದರು.
ರೇಷ್ಮಾ ಕೌರ ಅವರು ಹೊಸ ವರ್ಷದ ಶುಭಾಷಯಗಳನ್ನು ತಿಳಿಸುತ್ತ ಅವರ ಜೊತೆ ಕೇಕ್‍ನ್ನು ಕತ್ತರಿಸಿ ವೃದ್ಧರಿಗೆ ಬಟ್ಟೆ, ಹಣ್ಣುಗಳನ್ನು ಹಾಗೂ ಸಹಾಯಧನವನ್ನು ವಿತರಣೆ ಮಾಡಿದರು.
ಈ ಸಂದರ್ಭ ನಮಗೆ ಅತೀವ ಆನಂದ ನೀಡಿದೆ, ಅದಕ್ಕಾಗಿಯೇ ನಾವು ನೂತನ ವರ್ಷದ ಮೊದಲ ದಿನದಂದು ಬಡವರ ಮತ್ತು ವೃದ್ದರ ಹಸಿವು ನೀಗಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆಯಾಗಿ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮಗೆ ಸಾರ್ಥಕದ ಭಾವ ಮೂಡಿಸಿದೆ ಎಂದು ವಿನಮ್ರವಾಗಿ ಕೈ ಮುಗಿದರು. ಎಲ್ಲರೊಂದಿಗೆ ನೂತನ ವರ್ಷದ ಸಂತೋಷವನ್ನು ಹಂಚಿಕೊಂಡಿದ್ದರು.
ಈ ಕಾರ್ಯಕ್ರಮ ದತ್ತಾತ್ರಿ ಬೆಲ್ಲೂರೆ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗುರು ನಾನಕ ಶಾಲೆಯ ಎಲ್ಲಾ ಪ್ರಾಚಾರ್ಯರು ಮತ್ತು ಆಡಳಿತ ವರ್ಗದವರು ಉಪಸ್ಥಿತರಿದ್ದರು.