ವೃದ್ಧಾಶ್ರಮದಲ್ಲಿ ದ.ರಾ ಬೇಂದ್ರೆ ಜನ್ಮದಿನಾಚರಣೆ

ಸಂಜೆವಾಣಿ ವಾರ್ತೆ

ಹಿರಿಯೂರು: ಫೆ.1- ಇಲ್ಲಿನ ಯಾಜ್ಞವಲ್ಕ್ಯ ಪಬ್ಲಿಕ್ ಸ್ಕೂಲ್,ಸಿ ಬಿ ಎಸ್ ಇ, ಕೆ ಜಿ ವಿಭಾಗದಿಂದ ಶುಭೋದಯ ವೃದ್ಧಾಶ್ರಮಕ್ಕೆ ಭೇಟಿ ದ ರಾ ಬೇಂದ್ರೆ ಜನ್ಮ ದಿನೋತ್ಸವ ಆಚರಿಸಿದರು. ಇದರ ಅಂಗವಾಗಿದೇವರ ಸಮಾನರಾದ ವೃದ್ಧರಿಗೆ ವಂದಿಸಿ, ಗೌರವ ಭಾವವನ್ನು ಸೂಚಿಸಿ, ಅವರಿಗೆ ಮಕ್ಕಳಿಂದ,ವಸ್ತ್ರ,ಹಣ್ಣುಗಳನ್ನು ನೀಡಿ ಅವರನ್ನು ಮಾತನಾಡಿಸಿ,ಮಕ್ಕಳಿಗೆ ಅವರ ಮೇಲಿನ  ಗೌರವದ ಭಾವವನ್ನು ಮೂಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಉಪಾಧ್ಯಕ್ಷರಾದ ಕುಮಾರಿ ಡಾ.ರಾಧಿಕ, ಆಡಳಿತಾಧಿಕಾರಿಯಾದ ಶ್ರೀನಿವಾಸ ಮೂರ್ತಿ, ಪ್ರಾಂಶುಪಾಲರಾದ ಶ್ರೀಶನ್, ಕೆ. ಜಿ ವಿಭಾಗದ ಮುಖ್ಯಸ್ಥರಾದ ಚಿತ್ರಸೋಮೇಶ್, ಸಹ ಶಿಕ್ಷಕರುಗಳಾದ ಮಂಜುಳ,ಅಶ್ವಿನಿ,ಲೀಲಾ ಹಾಗೂ ಸಹಾಯಕರಾದ ಗಂಗಮ್ಮ,ಶಾಯಿನ ಪಾಲ್ಗೊಂಡಿದ್ದರು