ವೃದ್ಧಾಶ್ರಮದಲ್ಲಿ ದವಸಧಾನ್ಯ,ಹಣ್ಣು ವಿತರಣೆ

ಕಲಬುರಗಿ,ಮಾ.13: ಉತ್ತರಾದಿ ಮಠದ ಪೀಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ವರ್ಧಂತಿ ಪ್ರಯುಕ್ತ ವಿಶ್ವಮಧ್ವ ಮಹಾ ಪರಿಷತ್ ಕಲಬುರ್ಗಿ ಘಟಕ ಅಡಿಯಲ್ಲಿ ಹಂಸನಾಮಕ ,ಲಕ್ಷ್ಮೀನಾರಾಯಣ, ಶ್ರೀರಾಮ ಪಾರಾಯಣ ಸಂಘದ ವತಿಯಿಂದ ವೃದ್ಧಾಶ್ರಮದಲ್ಲಿ ಪಾರಾಯಣ ಕೈಗೊಂಡು,ದವಸ ಧಾನ್ಯ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.ಡಾ.ಕೃಷ್ಣ ಕಾಕಲವಾರ, ಪದ್ಮನಾಭ ಆಚಾರ್ಯ ಜೋಶಿ, ಪಾರಾಯಣ ಸಂಚಾಲಕ ರವಿ ಲಾತೂರಕರ,ಜಗನ್ನಾಥ ಆಚಾರ್ಯ ಸಗರ ,ವೃದ್ಧಾಶ್ರಮದ ಆಡಳಿತ ಮಂಡಳಿ ಸದಸ್ಯೆ ಸುಧಾ ಕರಲಗಿಕರ,ಸತ್ಯಭೋಧ, ಅನಿರುದ್ಧ, ಅಣ್ಣಾರಾವ ಅಡಕಿ ಹಾಗೂ ವೃದ್ಧಾಶ್ರಮದ ಹಿರಿಯರು ಉಪಸ್ಥಿತರಿದ್ದರು.