ವೃದ್ಧಾಶ್ರಮದಲ್ಲಿ ತಾಯಂದಿರ ದಿನ ಆಚರಿಸಿದ ಸಮಾಜಸೇವಕಿ ರೂಪಾ ಕಾಂಬಳೆ

ಅಥಣಿ :ಮೇ.14: ನಮ್ಮೆಲ್ಲರ ಜೀವನದಲ್ಲಿ ತಾಯಿಯ ಸ್ಥಾನಮಾನ ಅತ್ಯಂತ ಮಹತ್ವದ್ದಾಗಿದ್ದು. ತಾಯಿಗಿಂತ ಮಿಗಿಲಾದ ಶಕ್ತಿ ಈ ಜಗದಲ್ಲಿ ಬೇರೊಂದಿಲ್ಲ.ತಾಯಿ ಸರಳತೆ, ಉದಾತ್ತ ಮೌಲ್ಯ, ನಾಯಕತ್ವ, ತ್ಯಾಗದ ಗುಣಗಳನ್ನ ಕಲಿಸುವ ಏಕೈಕ ಗುರು ತಾಯಿ, ಪ್ರತಿಯೊಬ್ಬರೂ ಜನ್ಮ ನೀಡಿ ಸಾಕಿ ಸಲಹಿದ ತಾಯಿಯನ್ನು ಪ್ರೀತಿಸಿ ಗೌರವಿಸಬೇಕು ಎಂದು ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷೆ ರೂಪಾ ಕಾಂಬಳೆ ಹೇಳಿದರು.
ಅವರು ವಿಶ್ವ ತಾಯಂದಿರ ದಿನಾಚರಣೆಯ ನಿಮಿತ್ಯ ಅವರ ತಾಯಿಯ ಸವಿ ನೆನಪಿಗಾಗಿ ಚಮಕೇರಿ ರಸ್ತೆಯಲ್ಲಿರುವ ಅನಾಥಶ್ರಮ, ವೃದ್ದಾಶ್ರಮದಲ್ಲಿ ಕೇಕ ಕತ್ತರಿಸಿ ವೃದ್ಧರಿಗೆ ಭೋಜನ ಉಣಬಡಿಸುವ ಮೂಲಕ ತಾಯಂದಿರ ದಿನ ಅಚರಿಸಿ ಮಾತನಾಡುತ್ತಿದ್ದರು
ತಾಯಿಯ ತ್ಯಾಗ ಮತ್ತು ಪ್ರೀತಿಗೆ ಮಿತಿಯೆಂಬುದೇ ಇರುವುದಿಲ್ಲ. ತನ್ನ ಮಕ್ಕಳಿಗೆ ಕಿಂಚಿತ್ತು ಪ್ರೀತಿ ಕಡಿಮೆ ಮಾಡದೇ ಸದಾ ಕಾಲ ಪ್ರೀತಿಯನ್ನು ಧಾರೆ ಎರೆಯುವ ಏಕೈಕ ಜೀವವೇ ಅವ್ವ. ತಾನು ಹಸಿವಿನಲ್ಲಿ ಇದ್ದರೂ ತನ್ನ ಮಕ್ಕಳಿಗೆ ಹಸಿವಾಗದಂತೆ ನೋಡಿಕೊಳ್ಳುತ್ತಾ, ತಾನು ಎಷ್ಟೇ ಕಷ್ಟ ಅನುಭವಿಸಿದರೂ ಮಕ್ಕಳು ಸುಖದಿಂದ ಇರಲಿ ಎಂದು ಆಶಿಸುತ್ತಾ, ಆಕೆ ಅಕ್ಷರ ಕಲಿಯದಿದ್ದರೂ, ತನ್ನ ಮಗು ವಿದ್ಯಾಭ್ಯಾಸದಿಂದ ವಂಚಿತವಾಗಬಾರೆಂದು ಹಗಲು ರಾತ್ರಿ ಎನ್ನದೇ, ಸಮಯದ ಪರಿವಿಲ್ಲದೇ ಮನೆ ಒಳಗೆ ಮತ್ತು ಮನೆ ಹೊರಗೆ ಪ್ರತಿ ನಿತ್ಯ ತನ್ನವರಿಗೆ, ತನ್ನ ಮಕ್ಕಳಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ದುಡಿಮೆ ಮಾಡಿ ತನ್ನೆಲ್ಲ ಆಸೆ ಕನಸುಗಳನ್ನು ಬದಿಗೊತ್ತಿ ಮಕ್ಕಳ ಹಾರೈಕೆಯಲ್ಲಿ ತಾಯಿ ಬದುಕುತ್ತಾಳೆ ಎಂದು ಬಣ್ಣಿಸಿದರು.
ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮಾತೃಹೃದಯ ನನಗೆ ಬಂದದ್ದು ನನ್ನ ಅಮ್ಮನಿಂದ ಎಂದು ಹೇಳುವಾಗ ಕೇವಲ ಎರಡು ತಿಂಗಳ ಹಿಂದೆ ಅಷ್ಟೇ ಅಗಲಿದ ತನ್ನ ತಾಯಿಯನ್ನು ನೆನೆದು ಕಣ್ಣೀರಿಟ್ಟರು.
ಈ ಸಂದರ್ಭದಲ್ಲಿ ಅನ್ನ ದಾಸೋಹ ಸೇವೆ ಮಾಡಿ ಆಶ್ರಮಕ್ಕೆ ಸಹಾಯಧನ ನೀಡಲಾಯಿತು.
ಈ ವೇಳೆ ಮಹಾದೇವ ಬಿರಾದಾರ ದಂಪತಿಗಳು. ಈರಣ್ಣ ಅಡಿಗಲ್ಲ. ಕಾದಂಬರಿ, ಆದರ್ಶ, ಸಚೀನ, ಸತೀಶ, ನಿಕಿತಾ, ಮೇಘನಾ, ಚೈತ್ರಾ, ಶುಭಂ, ಪ್ರಜಾಕ್ತಾ, ಪ್ರತಿಕ್ಷಾ ಪೃಥ್ವಿರಾಜ, ವಿನಯ, ವಿಶ್ವಾಸ. ಉಪಸ್ಥಿತರಿದ್ದರು