ವೃದ್ಧಾಶ್ರಮಕ್ಕೆ ಸೋಲಾರ್ ವಾಟರ್ ಹೀಟರ್ ಕೊಡುಗೆ


ಧಾರವಾಡ, ಮಾ 14: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಸೆಲ್ಕೊ ಸೋಲಾರ್ ಫೌಂಡೇಶನ್ ಮತ್ತು ಧಾರವಾಡದ ಇನ್ನರ್ ವ್ಹೀಲ್ ಕ್ಲಬ್ ಸಂಯುಕ್ತವಾಗಿ ಕೊಡ ಮಾಡಿದ 1,000 ಲೀಟರ್ ಸಾಮಥ್ರ್ಯದ ಸೌರ ವಾಟರ್ ಹೀಟರ್‍ಗಳು, ಧಾರವಾಡ ನಿಗದಿ ಗ್ರಾಮದ ಬಳಿಯ ಆನಂದರಾಶ್ರಮದ (ವೃದ್ಧಾಶ್ರಮ) ಸುಮಾರು 60 ವೃದ್ಧ ಜೀವಿಗಳ ಬಿಸಿನೀರಿನ ಅಗತ್ಯಗಳನ್ನು ಪೂರೈಸಲು ನೆರವಾಗಿದೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕ ಬಿ. ಸಿ. ರವಿಚಂದ್ರ ಅವರು ಸೌರ ವಾಟರ್ ಹೀಟರ್‍ಗಳನ್ನು ಇನ್ನರ್ ವೀಲ್ ಐಐಡಬ್ಲ್ಯೂ ಅಧ್ಯಕ್ಷೆ ಡಾ. ಬೀನಾ ವ್ಯಾಸ್, ಸ್ಥಳೀಯ ಕ್ಲಬ್ ಅಧ್ಯಕ್ಷೆ ಮಥುರಾ ಕೌಲಕರ್ಣಿ, ಕವಿತಾ ದೇಶಪಾಂಡೆ, ಡಾ.ಸೌಭಾಗ್ಯ ಕುಲಕರ್ಣಿ, ಡಾ.ಜ್ಯೋತಿ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಜ್ಯೋತಿಕಿರಣದಾಸ್, ಸೆಲ್ಕೋ ಸೋಲಾರ್ ಸಂಸ್ಥೆಯ ಉಪ ಮಹಾ ಪ್ರಬಂಧಕ ಪ್ರಸನ್ನ ಹೆಗೆಡೆ, ಆನಂದಾಶ್ರಮದ ಅಧ್ಯಕ್ಷ ಸುರೇಶ್ ಕುಲಕರ್ಣಿ, ಮತ್ತಿತರ ಪದಾಧಿಕಾರಿಗಳ ಸಮ್ಮುಖದಲ್ಲಿ ನಿಗದಿ ಗ್ರಾಮದ ಬಳಿಯ ಆನಂದಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮರ್ಪಿಸಿದರು.