ವೃದ್ಧರ ನೋವು ಆಲಿಸಿದ ಸಚಿವ ಶ್ರೀರಾಮುಲು

ಬಳ್ಳಾರಿ, ಏ.20: ಕಳೆದ ಹಲವು ದಿನಗಳಿಂದ ನಿರಂತರವಾಗಿ ವಾರ್ಡು, ವಾರ್ಡುಗಳಲ್ಲಿ ಸಂಚರಿಸಿ ತಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಇಲ್ಲಿನ 6ನೇ ವಾರ್ಡಿನಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ಅಷ್ಟೇ ಅಲ್ಲಿದೆ ವಾರ್ಡಿನಲ್ಲಿದ್ದ ವೃದ್ದರ ನೋವುಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಚುನಾವಣೆ ನಂತರ ಸ್ಪಂದಿಸುವ ಬಗ್ಗೆ ತಿಳಿಸಿದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ 60 ವರ್ಷ ದಾಟಿದ ವೃದ್ಧಾಪ್ಯ ವೇತನ ನೀಡುತ್ತಿದೆ. ನೀವು ಅದಕ್ಕಾಗಿ ಅರ್ಜಿ ಸಲ್ಲಿಸಿ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಪರಿಶೀಲಿಸಿ ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ‘ಮುದೇರ’ ಸಂಬಳ ಬರುತ್ತೆ ಎಂದು ಗ್ರಾಮ್ಯ ಭಾಷೆಯಲ್ಲಿಯೇ ಹಿರಿಯ ನಾಗರೀಕರಿಗೆ ಮನವರಿಕೆ ಮಾಡಿದರು. ಈಗಾಗಲೇ ಬಹುತೇಕರಿಗೆ ನೀಡುತ್ತಿದೆ. ದೊರೆಯದಿದ್ದವರಿಗೆ ಚುನಾವಣೆ ನಂತರ ಪಾಲಿಕೆ ಸಿಬ್ಬಂದಿ ಇಲ್ಲಾ ವಾರ್ಡಿನ ಪ್ರತಿನಿಧಿ ಈ ಕೆಲಸ ಮಾಡಲಿದ್ದಾರೆ. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಭ್ಯರ್ಥಿ ಶ್ರೀವರ್ಧಿನಿ ಹುಂಡೇಕರ್ ರಾಜೇಶ್ ಅವರು ವಿದ್ಯಾವಂತರಾಗಿದ್ದು ನಿಮ್ಮ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಲಿದ್ದಾರೆಂದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.
ಅಲ್ಲಲ್ಲಿ ಶ್ರೀರಾಮುಲು ಕುಳಿತು ಮತದಾರರ ಸಮಸ್ಯೆಗಳನ್ನು ಆಲಿಸಿ ಕಾರ್ಯಕರ್ತರಿಗೆ ನೋಟ್ ಮಾಡಿಕೊಳ್ಳಿ ನಂತರ ಇವನ್ನು ಬಗೆಹರಿಸಿ ಎಂದು ಸೂಚಿಸಿದರು.