ವೃದ್ಧರು- ವಿಕಲಾಚೇತನರಿಗೆ ವೀಲ್ ಚೇರ್ ವ್ಯವಸ್ಥೆ

ರಾಯಚೂತು ಏ೧೭:-ಮಸ್ಕಿ ವಿಧಾನ ಸಭೆ ಚುಣಾವಣೆಯಲ್ಲಿ ಬಿಸಿಲೇರಿದಂತೆ ಮತದಾನ ಚುರುಕುಗೊಂಡುತು.
ಅನೇಕ ಮತಗಟ್ಟೆಗಳಲ್ಲಿ ವಯೋವೃದ್ಧರು ಮತ್ತು ನಡೆಯಲು ಸಾಧ್ಯವಾಗದವರು ವೀಲ್ ಚೇರ್ ಮೇಲೆ ಬಂದು ಮತ ಚಲಾಯಿಸಿದರು. ಸಹಾಯಕರ ನೆರವಿನೊಂದಿಗೆ ಬಂದ ಈ ವೃದ್ಧರು ಮತ್ತು ನಡೆಯಲು ಸಾಧ್ಯವಾಗದವರು ತಮ್ಮ ಹಕ್ಕು ಚಲಾವಣೆ ಮಾಡಿದರು
ಪ್ರತಿ ಮತಗಟ್ಟೆಯಲ್ಲಿ ವೀಲ್ ಚೇರು ವ್ಯವಸ್ಥೆ ಮಾಡಲಾಗಿತ್ತು. ಇವುಗಳ ನೆರವಿನಂದ ಬಿಸಿಲಲ್ಲು ವೃದ್ಧರು ಮತ್ತು ನಡೆಯಲಾಗದ ಮತದಾರರು ಮತಚಲಾಯಿಸಿದ್ದು ವಿಶೇಷವಾಗಿತ್ತು. ಸಖಿ ಗುಲಾಬಿ ಮತಗಟ್ಟೆಯಲ್ಲು ಮತದಾನ ಬಿರುಸಿನಿಂದ ಸಾಗಿತ್ತು. ಮತಗಟ್ಟೆಗಳ ಮುಂದೆ ಭಾರಿ ಬಂದೋಬಸ್ತ್‌ನೊಂದಿಗೆ ಮತದಾನಕ್ಕೆ ನೆರವಾಗುವ ವ್ಯವಸ್ಥೆಯೂ ಮಾಡಲಾಗಿತ್ತು.