ವೃದ್ಧರು ದೇವರ ಸಮಾನ ಅವರನ್ನು ಪ್ರೀತಿಯಿಂದ ಕಾಣಬೇಕು

ಚಾಮರಾಜನಗರ, ಜೂ.11: ಕೊರೊನಾ ಸಂಕಷ್ಟದ ಮೊದಲನೇ ಹಂತದಿಂದಲೂ ಸಾಕಷ್ಟು ಸಮಾಜಸೇವೆಯನ್ನು ಮಾಡುತ್ತಾ ತಮ್ಮನ್ನು ತಾವು ಹೆಚ್ಚು ನೊಂದವರ ದೀನದಲಿತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ಸಮಾಜದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಪಿ.ವೃಷಭೇಂದ್ರಪ್ಪ.
ಸಂಕಷ್ಟದ ಪರಿಸ್ಥಿತಿಯಲ್ಲಿ ಈಗಾಗಲೇ ಹಸಿದವರಿಗೆ ಕೈ ತುತ್ತು ಎನ್ನುವ ಪರಿಕಲ್ಪನೆಯಲ್ಲಿ ಕಳೆದ 1 ತಿಂಗಳಿಂದ ಪ್ರತಿದಿನ 600 ಜನರಿಗೆ ಮಧ್ಯಾಹ್ನದ ಆಹಾರವನ್ನು ನೀಡುತ್ತಾ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಗಳಿಗೆ ಹಸಿವನ್ನು ನೀಗಿಸುತ್ತಿದಾರೆ ತೀವ್ರ ಸಂಕಷ್ಟದಲ್ಲಿರುವ ಯಾವುದೇ ಉದ್ಯೋಗವಿಲ್ಲದೆ ಭಿಕ್ಷಾಟನೆಯೊಂದೆ ಮಾರ್ಗವಾಗಿರುವ ತೃತೀಯ ಲಿಂಗಿಗಳಿಗೆ ಆಹಾರ ಕಿಟ್, ಮಾಸ್ಕ್ ವಿತರಿಸುವ ಮುಖೇನ ನೆರವಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ.ವೃಷಭೇಂದ್ರಪ್ಪ ರವರು ಮೂಕಳ್ಳಿ ಗ್ರಾಮದಲ್ಲಿ ಕುಟುಂಬವೊಂದು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವುದನ್ನು ತಿಳಿದು ಉಳಿದ ಏಕೈಕ ವಂಶದ ಕುಡಿ ಮಾದಲಾಂಬಿಕೆ ರವರನ್ನು ಭೇಟಿ ಮಾಡಿ ಧೈರ್ಯ ತುಂಬಿ ಆರ್ಥಿಕ ಸಹಾಯವನ್ನು ನೀಡುವ ಮುಖಾಂತರ ಮಾನವೀಯತೆಯನ್ನು ಮೆರೆದಿದ್ದಾರೆ ನಗರದ ದೀನಬಂಧು ಶಾಲೆಯ ಹತ್ತಿರವಿರುವ ಮೂಡಲಧ್ವನಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ವೃದ್ಧರ ಯೋಗಕ್ಷೇಮವನ್ನು ವಿಚಾರಿಸಿ ನಿಮ್ಮೆಲ್ಲರ ಜೊತೆ ನಾವೆಲ್ಲರೂ ಇದ್ದೇವೆ ನಿಮ್ಮಗಳ ಸೇವೆಯನ್ನು ಮಾಡೋದು ನಮ್ಮ ಭಾಗ್ಯ ನಾವು ಕೂಡ ಆಗಾಗ ಬಂದು ನಿಮ್ಮ ಯೋಗಕ್ಷೇಮವನ್ನು ವಿಚಾರಿಸಿ ಕೊಳ್ಳುತ್ತೇವೆ ಎಂದು ತಿಳಿಸಿದ ಅವರು ಸುಮಾರು 2 ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ಮಾಸ್ಕ್ ಸ್ಯಾನಿಟೈಸರ್ ವಿತರಿಸುವ ಮೂಲಕ ನೆರವಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಗತ್ತು ಕಂಡರಿಯದ ಕೊರೊನಾ ಪರಿಸ್ಥಿತಿಯು ಅನೇಕರನ್ನು ಕಂಗೆಡಿಸಿದೆ ಈ ಸಂದರ್ಭದಲ್ಲಿ ನನ್ನ ಮಿತಿಯಲ್ಲಿ ಸಾಧ್ಯವಾದಷ್ಟು ಸೇವೆಯನ್ನು ಮಾಡುತ್ತಾ ಸಮಾಜಕ್ಕೆ ನನ್ನ ಅಳಿಲು ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಕೊರೊನಾವನ್ನು ಹಿಮ್ಮೆಟ್ಟಿಸಬೇಕಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮೂಡಲಧ್ವನಿ ಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕೂಸಣ್ಣ, ವೀರೇಂದ್ರ ಯೋಗ ಪ್ರಕಾಶ್ ಉಡಿಗಾಲ ಶಶಿ ಬೇಡರಪುರ ಮಹೇಶ್ ರಂಗಸ್ವಾಮಿ ಹೊಸೂರು ಜಗದೀಶ್ ಲಯನ್ ಪ್ರಕಾಶ್ ಜೈನ್ ಲೋಕೇಶ್ ಜೈನ್ ಕನ್ಯಾಲಾಲ್ ರವರು ಹಾಜರಿದ್ದರು.