ವೃದ್ಧರು ದೇವರಿಗೆ ಸಮಾನ  : ಸರ್ವಮಂಗಳ 

ಹಿರಿಯೂರು.ಜೂ. 14; ವೃದ್ಧರು ದೇವರಿಗೆ ಸಮಾನ, ವೃದ್ಧಾಶ್ರಮಗಳು ದೇವಾಲಯಗಳಿದ್ದಂತೆ ಅವರಿಗೆ ಆಶ್ರಯ ನೀಡಿ ಪಾಲನೆ ಮಾಡುತ್ತಿರುವ ಸಂಸ್ಥೆಗಳ  ಕಾರ್ಯ ತುಂಬಾ ಶ್ಲಾಘನೀಯವಾದದ್ದು  ಎಂದು ಇನ್ನರ್ವೀಲ್  ಕ್ಲಬ್ ಅಧ್ಯಕ್ಷರಾದ ಸರ್ವಮಂಗಳ ರಮೇಶ್ ಹೇಳಿದರು. ಇನ್ನರ್ವೀಲ್ ಕ್ಲಬ್ ವತಿಯಿಂದ ನಗರದ ಶ್ರೀ ಮಾರಿಕಾಂಬ ವೃದ್ಧಾಶ್ರಮದಲ್ಲಿ ಬೆಡ್ ಸ್ಪ್ರೆಡ್ ಗಳನ್ನು ವಿತರಿಸಿ ಅವರು  ಮಾತನಾಡಿದರು. ಇನ್ನರ್ ವೀಲ್ ಕ್ಲಬ್ ವತಿಯಿಂದ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ ಇನ್ನು ಮುಂದೆಯೂ ಸಾರ್ವಜನಿಕರಿಗೆ ಸಹಕಾರವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇನ್ನರ್ವೀಲ್  ಸಂಸ್ಥೆಯ ಕಾರ್ಯದರ್ಶಿ ತ್ರಿವೇಣಿ ಶಶಿಧರ್,  ಸೌಮ್ಯ ಪ್ರಶಾಂತ್ ಹಾಗೂ ಮಾರಿಕಾಂಬ ವೃದ್ಧಾಶ್ರಮದ ಅಧ್ಯಕ್ಷರಾದ ವೈ ಕೃಷ್ಣಪ್ಪ ಕಾರ್ಯದರ್ಶಿ ಗುರುಮೂರ್ತಿ ಮತ್ತಿತರರು  ಉಪಸ್ಥಿತರಿದ್ದರು.