ವೃದ್ಧರು ದೇವರಿಗೆ ಸಮಾನ : ಮಾತಾಜಿ ಚೈತನ್ಯಮಯಿ

ಹಿರಿಯೂರು : ಮೇ.5-ವೃದ್ಧರು ದೇವರಿಗೆ ಸಮಾನ ವೃದ್ಧಾಶ್ರಮಗಳು ದೇವಾಲಯಗಳಿದ್ದಂತೆ ವೃದ್ಧಾಶ್ರಮಗಳಿಗೆ ಸಹಾಯ ನೀಡುತ್ತಿರುವವರ ಸಹಕಾರ ತುಂಬಾ ಮೆಚ್ಚುವಂಥದ್ದು ಎಂದು ಹಿರಿಯೂರು ಶಾರದಾಶ್ರಮದ ಮಾತಾಜಿ ಚೈತನ್ಯಮಯಿ ಹೇಳಿದರು. ತಾಲೂಕಿನ ಭೀಮನ ಬಂಡೆ ಬಳಿ ಇರುವ ವೃದ್ಧಾಶ್ರಮದಲ್ಲಿ  ವಿವಿಧ  ಪೂಜಾ ಕಾರ್ಯಕ್ರಮಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಶಿಲಾಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.   ಶ್ರೀಮತಿ ಚಂದ್ರವದನ ಕುಟುಂಬದವರು   ದಿವಂಗತ ಸತ್ಯಮೂರ್ತಿಯವರ ಸ್ಮರಣಾರ್ಥದಲ್ಲಿ  ಕೊಠಡಿ ನಿರ್ಮಿಸಿ ಕೊಟ್ಟಿದ್ದು ಹಾಗೂ ರೋಟರಿ ಹೆಲ್ಪಿಂಗ್ ಹ್ಯಾಂಡ್ಸ್ ಟೀಂ ಸೇವೆಯ ನೂತನ ಅತಿಥಿಗೃಹದ ಲೋಕಾರ್ಪಣೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ   ಟಿ.ಹೆಚ್. ಓ.  ಡಾ.ಟಿ.ವೆಂಕಟೇಶ್, ಶ್ರೀಮತಿ ಅಶ್ವಿನಿ ಎ. ಮೈಸೂರು, ಶ್ರೀಮತಿ ಚಂದ್ರವದನ ಸತ್ಯಮೂರ್ತಿಯವರು, ಹೆಚ್.ಎಸ್.ಪ್ರಶಾಂತ್, ಶ್ರೀಮತಿ ಸೌಮ್ಯ ಪ್ರಶಾಂತ್, ಹೆಚ್.ಎಸ್ ಸುಂದರರಾಜ್, ಬಿ.ಕೆ ನಾಗಣ್ಣ, ಮಹಾಬಲೇಶ್ವರ ಶೆಟ್ಟಿ, ಎಂ.ಎಸ್.ರಾಘವೇಂದ್ರ, ಎ.ರಾಘವೇಂದ್ರ, ಚಂದ್ರಕೀರ್ತಿ ಗುಜ್ಜಾರ್, ಕಿರಣ್ ಕುಮಾರ್ ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಸೀತಾ ಶ್ರೀನಿವಾಸ್, ಪಿ. ಶಿವಶಂಕರ್,   ಹೆಚ್. ಡಿ.ವಸಂತಕುಮಾರ್ ಹಾಗೂ ರೋಟರಿಯ  ಸದಸ್ಯರುಗಳು ಮತ್ತು  ಆಶ್ರಮದ ಹಿತೈಷಿಗಳು,  ಭಾಗವಹಿಸಿದ್ದರು.