ವೃದ್ಧನ ಮೇಲೆ ಕಾಡಾನೆ ದಾಳಿ

ಮಡಿಕೇರಿ: ಮೇ.28: ಅಗತ್ಯ ವಸ್ತು ಖರೀದಿಗೆ ಶುಕ್ರವಾರ ಅವಕಾಶ ನೀಡಿದ ಹಿನ್ನೆಲೆ ಪಟ್ಟಣಕ್ಕೆ ತೆರಳುತ್ತಿದ್ದ ವೃದ್ಧರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದಿದೆ.
ದೇವಮಚ್ಚಿ ಹಾಡಿ ನಿವಾಸಿ ನಾಣು(60) ಮೃತ ದುರ್ದೈವಿ. ಮುಂಜಾನೆ 6.30 ಗಂಟೆಗೆ ಘಟನೆ ನಡೆದಿದೆ.
ನಾಣು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾಡಾನೆ ಮೈಸೂರು ಮುಖ್ಯ ರಸ್ತೆಯಿಂದ ದೇವಮಚ್ಚಿ ಕಡೆಗೆ ತೆರಳಿದ್ದು, ಸ್ಥಳೀಯರು ಎಚ್ಚರ ವಹಿಸಲು ಸೂಚಿಸಲಾಗಿದೆ.