ವೃದ್ಧನನ್ನು ಅಟ್ಟಾಡಿಸಿ ತುಳಿದು ಹಾಕಿದ ಕಾಡಾನೆ: ಇಬ್ಬರು ಮಹಿಳೆಯರು ಪಾರು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.01- ಕೊಳ್ಳೇಗಾಲ ತಾಲ್ಲೂಕಿನ ಕರಳಕಟ್ಟೆ ಗ್ರಾಮದಲ್ಲಿಕಾಡಾನೆ ದಾಳಿಗೆ ಗುರುವಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಗ್ರಾಮದ ಸಣ್ಣಮಾದ (72) ಆನೆ ದಾಳಿಗೆ ಬಲಿಯಾದ ವ್ಯಕ್ತಿ. ಕರಳಕಟ್ಟೆ ಬಿಆರ್‍ಟಿ ಹುಲಿ ಸಂರಕ್ಷಿತಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದಗ್ರಾಮವಾಗಿದೆ. ಬೆಳಗ್ಗೆ 8 ಗಂಟೆ ಸಮಯದಲ್ಲಿ ಕರಳಕಟ್ಟೆ ಗ್ರಾಮಕ್ಕೆಕಾಡಾನೆಯೊಂದು ಬಂದಿದೆ. ಈ ವೇಳೆ ಸಣ್ಣಮಾದ, ಪತ್ನಿಜಡೆ ಮಾದಮ್ಮ, ನಾದಿನಿ ರಂಗಮ್ಮಅವರಜತೆ ಕರಳಕಟ್ಟೆ ಬಳಿಯಿರುವ ಮೇಗಲದೊಡ್ಡಿಗೆ ತೆರಳುವಾಗ ದಾರಿಯಲ್ಲೆ ನಿಂತಿದ್ದಆನೆಯೊಂದು ದಿಢೀರ್ ದಾಳಿ ನಡೆಸಿದೆ. ಈ ವೇಳೆ ಆನೆಯಿಂದ ತಪ್ಪಿಸಿಕೊಳ್ಳಲು ಸಣ್ಣ ಮಾದಓಡಲು ಪ್ರಾರಂಭಿಸಿದ್ದಾನೆ. ಆನೆ ಆತನನ್ನು ಅಟ್ಟಾಡಿಸಿಕೊಂಡು ಹಿಂಬಾಲಿಸಿ ಆತನತೊಡೆ, ಕಾಲನ್ನು ತುಳಿದು ಸಾಯಿಸಿದೆ. ಪತ್ನಿಜಡೆ ಮಾದಮ್ಮ, ನಾದಿನಿ ರಂಗಮ್ಮಅವರುಆನೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ಪಾರಾಗಿದ್ದಾರೆ.
ಸ್ಥಳಕ್ಕೆ ಸಹಾಯಕಅರಣ್ಯ ಸಂರಕ್ಷಣಾದಿಕಾರಿ ನಂದಕುಮಾರ್‍ಇನ್ನಿತರ ಸಿಬ್ಬಂದಿ ಹಾಗೂ ಗ್ರಾಮಾಂತರ ಪೆÇಲೀಸ್‍ಠಾಣೆಯ ಪಿಎಸ್‍ಐಗಣೇಶ್ ಭೇಟಿ ನೀಡಿ ಪರಿಶೀಲಿಸಿದರು.
ಪರಿಹಾರಕ್ಕೆ ಒತ್ತಾಯ: ಸ್ಥಳಕ್ಕೆ ಎಸಿಎಫ್ ನಂದಕುಮಾರ್ ಭೇಟಿ ನೀಡಿದ ವೇಳೆ ಗ್ರಾಮಸ್ಥರು ಪರಿಹಾರಕ್ಕೆ ಒತ್ತಾಯಿಸಿದರು. ಈ ವೇಳೆ ಮೃತನ ಸಂಬಂಧಿಕರು, ತಿಮ್ಮರಾಜೀಪುರದ ಮಾಜಿಅಧ್ಯಕ್ಷರಾಜು ಹಾಗೂ ಗ್ರಾಮಸ್ಥರುಕಾಡಾನೆ ದಾಳಿಗೆ ಬಲಿಯಾದ ಸಣ್ಣ ಮಾದನಿಗೆ ಸೂಕ್ತ ಪರಿಹಾರ ನೀಡಬೇಕು. ಕರಳಕಟ್ಟೆ ಗ್ರಾಮವುಕಾಡಿನಅಂಚಿನಲ್ಲಿರುವುದ್ದರಿಂದಇಲ್ಲಿ ವಾಸಿಸುವ ಜನರಿಗೆಯಾವುದೇರಕ್ಷಣೆಯಿಲ್ಲ. ಕಳೆದ ತಿಂಗಳಿನಿಂದ 2 ಆನೆಗಳು ಬರುತ್ತಿವೆ. ಆದರೆ, ಜಿಂಕೆ, ಕಾಡು ಹಂದಿ ಬಂದು ಬೆಳೆಯನ್ನು ಹಾನಿ ಮಾಡುತ್ತಿದೆ. ಈ ಬಗ್ಗೆ ಅರಣ್ಯ ಸಿಬ್ಬಂದಿ ನಂಜುಂಡಸ್ವಾಮಿಎಂಬುವರಿಗೆ ಹಲವು ಬಾರಿ ಮಾಹಿತಿ ನೀಡಿದ್ದೇವೆ. ಏನು ಕ್ರಮವಹಿಸಲಿಲ್ಲ ಎಂದುಅಕ್ರೋಶ ಹೊರಹಾಕಿದರು.
ನಂತರಇದಕ್ಕೆ ಪ್ರತಿಕ್ರಿಯಿಸಿದ ಎಸಿಎಫ್ ನಂದಕುಮಾರ್ ಮಾತನಾಡಿ, ಕಾಡಾನೆ ದಾಳಿಗೆ ಮನುಷ್ಯ ಮೃತಪಟ್ಟರೆ ಸರ್ಕಾರದಏನೆಲ್ಲ ಸೌಲಭ್ಯ ಸಿಗುತ್ತದೆಯೋ ಅದನ್ನುಅವರಕುಟುಂಬಗೆ ಸಿಗುವಂತೆ ಕ್ರಮವಹಿಸುತ್ತೇವೆಎಂದು ಭರವಸೆ ನೀಡಿದರು. ಆನಂತರ ಮೃತದೇಹವನ್ನು ಸರ್ಕಾರಿ ಉಪವಿಭಾಗಆಸ್ಪತ್ರೆಯ ಶವಾಗಾರಕ್ಕೆರವಾನಿ ಸಲಾಯಿತು.