ವೃದ್ದೆಯ ಬಳಿ ಚಿನ್ನದ ಸರ ಅಪರಣ

ಕೋಲಾರ,ಜ.೧೨:ಕೋಲಾರದಲ್ಲಿ ಸರಗಳ್ಳರು ತಮ್ಮ ಅಟ್ಟಹಾಸ ಮೆರೆದಿದ್ದು, ಬೆಳಗ್ಗೆ ವಾಕಿಂಗ್ ಹೋಗ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ವೃದ್ಧೆಯ ೪೦ ಗ್ರಾಂ ಚಿನ್ನದ ಸರ ಕಸಿದುಕೊಂಡು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
ಕೋಲಾರ ನಗರದ ಪಿ.ಸಿ.ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ಪಿ.ಸಿ.ಬಡಾವಣೆಯ ನಿವಾಸಿ ಪಾರ್ವತಮ್ಮ (೭೨) ಎಂಬುವವರ ಸುಮಾರು ಎರಡೂವರೆ ಲಕ್ಷ ಬೆಲೆ ಬಾಳೊ ಚಿನ್ನದ ಸರ ಎಗರಿಸಿದ್ದಾರೆ. ಇನ್ನೂ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು, ದುಷ್ಕರ್ಮಿಗಳು ಚಿನ್ನದ ಸರ ಕಸಿದುಕೊಂಡು ಹೋಗುವ ದೃಷ್ಯಗಳು ಅಲ್ಲೆ ಸ್ಥಳೀಯರೊಬ್ಬರ ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ಪ್ರಕರಣ ದಾಖಲು ಮಾಡಿಕೊಂಡಿರುವ ಕೋಲಾರ ನಗರ ಪೊಲೀಸರು ಸಿಸಿ ಟಿವಿ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.