ವೃದ್ದಾಪ್ಯ, ವಿಧವಾ ವೇತನ, ಪಡಿತರ ಚೀಟಿಗಾಗಿ ಪರದಾಟ ಅಧಿಕಾರಿಗಳಿಂದ ಭರವಸೆ

ಶಹಾಪುರ:ಮಾ.21:ಸರ್ಕಾರ ಪ್ರತಿ ಶನಿವಾರಕ್ಕೊಮ್ಮೆ ಅಧಿಕಾರಿಗಳ ನಡೆ, ಗ್ರಾಮದ ಕಡೆ ಎನ್ನವ ಯೊಜನೆಯನ್ನು ಜಾರಿಗೊಳಿಸಿದ್ದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಶನಿವಾರ ಒಂದೊಂದು ಕುಗ್ರಾಮದಲ್ಲಿ, ಗ್ರಾಮ ವಾಸ್ತವ್ಯ ನೆಡೆಯುತ್ತಿದೆ. ಅದರಂತೆ ಶಹಾಪುರ ತಾಲೂಕಿನ ಯಾದಗಿರಿ ಮತ ಕ್ಷೇತ್ರದ ತಂಗಡಗಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ನಡೆಯಿತು. ಸಾರ್ವಜನಿಕ ಹಿತಕ್ಕಾಗಿ ಕಾಮನ್ ಸರ್ವಸ್ ಸೆಂಟರ್ ತೆರೆಯಲಾಗಿತ್ತು. ಜಿಲ್ಲಾಧಿಕಾರಿಗಳ ಸಿ.ಎಸ್.ಸಿ ಕೆಂದ್ರ ಸ್ಥಾನದ ವ್ಯವಸ್ಥಾಪಕರಾದ ಸಿದ್ದು ಹರಸೂರವರ ಸಮ್ಮುಖದಲ್ಲಿ ನೆಡೆದ ಈ ಗ್ರಾಮದ ವಾಸ್ತವ್ಯದಲ್ಲಿ ವಯೋ ವೃದ್ದರು, ವಿಧುವೆಯರು, ಅಂಗವೀಕಲರು ಮತ್ತು ಪಡಿತರ ಚೀಟಿ ಇಲ್ಲದ ನಿರ್ಗತಿಕರು ಹೆಚ್ಚಾಗಿ ಅಧಿಕಾರಿಗಳ ಹತ್ತಿರದಲ್ಲಿ ತಮ್ಮ ಅಳಲನ್ನು ತೊಡಿಕೊಂಡರು.

ಹಲವಾರು ಕುಟುಂಬಗಳಲ್ಲಿ ಪಡಿತರ ಚೀಟಿಯಿಂದ ಹೆತ್ತ ತಂದೆ ತಾಯಿಂದಿರ ಹೆಸರನ್ನೇ ಕೈ ಬಿಟ್ಟ ಅಪರೂಪದ ಪ್ರಸಂಗಗಳು ಕಂಡು ಬಂದವು. ಅನೇಕ ವಯೋ ವೃದ್ದರು ಆಗಮಿಸಿ ತಮ್ಮ ದುಃಖವನ್ನು ಮನವರಿಕೆ ಮಾಡಿದರು. ಹೆತ್ತ ಮಕ್ಕಳು ತಮ್ಮ ಪಡಿತರ ಚೀಟಿಯಲ್ಲಿ ಹೆಸರನ್ನು ಇಟ್ಟುಕೊಂಡು ಗೂಳೆ ಹೊಗಿದ್ದವರು. ಪಡಿತರ ಚೀಟಿಯಿಂದ ತಾಯಿಂದಿರನ್ನು ವಂಚಿತರನ್ನಾಗಿಸಿದ್ದ ಸಂಧರ್ಭಗಳು ಕಂಡು ಬಂದಿವೆ. ಕಾಮನ್ ಸರ್ವಿಸ್ ಕೇಂದ್ರದಡಿಯಲ್ಲಿ ಬರುವ ಸೇವೆಗಳನ್ನು ಕುರಿತು ಹರಸೂರವರು ಮನವರಿಕೆ ಮಾಡಿದರು. ತಾಲೂಕಿನ ತಹಸಿಲ್ದಾರ ಜಗನಾಥರಡ್ಡಿಯವರಿಗೆ ಗ್ರಾಮದ ಹಲವಾರು ಜನ ನಿರ್ಗತಿಕರು ಸಮಸ್ಯೆಗಳನ್ನು ತೊಡಿಕೊಂಡರು. ಗ್ರಾಮದಲ್ಲಿ ಸಮಪರ್ಕವಾಗಿ ವಿಧ್ಯುತ್ ಸರಬರಾಜು ಆಗುತ್ತಿಲ್ಲ ಎಂದು ದೂರಿದರು. ಅನೇಕ ವಯೋ ವೃದ್ದರು ತಮಗೆ ಸರ್ಕಾರದ ಮಾಶಾಸನ ಬರುತ್ತಿಲ್ಲವೆಂದು ಅಳಲು ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ತಹಸಿಲ್ದಾರ ಜಗನಾಥರಡ್ಡಿಯವರು, ಗ್ರಾಮದ ವಯೋ ವೃದ್ದರು, ವಿಧುವೆಯರು, ಅಂಗವೀಕಲರು, ಯಾರಿಗೆ ಮಾಶಾಸನದಿಂದ ವಂಚಿತಗೊಂಡ ಬಗ್ಗೆ ಅರ್ಜಿ ಸಲ್ಲಿಸಿ, ಪರಾರ್ಮಶ ಮಾಡುವದರ ಮುಖಾಂತರ ಪುನಃ ಮಂಜೂರಿಗೆ ಅನೂಕೂಲ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು. ಈ ಗ್ರಾಮವಾಸ್ತವ್ಯ ಸಮಾರಂಭದಲ್ಲಿ ಕಂದಾಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.