ವೃದ್ದರ ಮಾಶಾಸನ ಹೆಚ್ಚಳ ಮಾಡಿದದ್ದುಬಿಜೆಪಿ :ಸೋಮಶೇಖರ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.16: ವೃದ್ದರ ಸಂಕಷ್ಟ ಅರಿತಿರುವ ನಮ್ಮ ಬಿಜೆಪಿ ಸರ್ಕಾರ ವೃದ್ಯಾಪ್ಯ ವೇತನವನ್ನು ಹೆಚ್ಚಳ ಮಾಡಿದೆ. ಅಷ್ಟೇ ಅಲ್ಲ 60 ಮೀರಿದ ಎಲ್ಲರಿಗೂ ಮನೆ ಮನೆಗೆ ಬಂದು  ದಾಖಲೆ ಸಂಗ್ರಹಿಸಿ ವೃದ್ಯಾಪ್ಯ ವೇತನ ಮಂಜೂರು ಮಾಡುತ್ತಿದೆಂದು ನಗರ ಶಾಸಕ‌ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದ 35 ನೇ ವಾರ್ಡಿನ ಹವಂಬಾವಿ ಪ್ರದೇಶದ ಮನೆ ಮನೆಗಳಿಗೆ ತೆರಳಿ ಮತ ಯಾಚನೆ ಮಾಡಿ ವೃದ್ದೆಯೊಬ್ಬರ ಕುಳಿತು ಆಕೆಯ ನೋವು ನಲಿವು ಅಸಲಿಸಿದರು.
ಹಿರಿಯರ ಬಗ್ಗೆ ಬಹಳ ಬಿಜೆಪಿ ತನ್ನದೇ ಗೌರವ ಹೊಂದಿದೆ. ಅದಕ್ಕಾಗಿ ವೃದ್ದರ ಮಾಸಿಕ‌ ಪಿಂಚಣಿಯನ್ನು ವೇತನ ಹೆಚ್ಚಿಸಿದೆ ಎಂಬುದನ್ನು ತಿಳಿಸಿ. ತಾವು ಮತ್ತೊಮ್ಮೆ ಶಾಸಕರಾಗಲು ಬಯಸಿ ಸ್ಪರ್ಧೆ ಮಾಡಿದ್ದು ಮತ ನೀಡುವಂತೆ  ಮಾಡಿದರು. ಇದಕ್ಕೆ ಆ ವೃದ್ದೆ ನಿಮ್ಮಂತಹವರು ಗೆಲಿಯಬೇಕೆಂದು ಆಶಿರ್ವಾದ ಮಾಡಿದರು.
ಯಾರು ಅಭಿವೃದ್ಧಿಗೆ ಒತ್ತು ನೀಡಿ ಆಡಳಿತ ನಡೆಸುತ್ತಾರೆ ಎಂಬುದನ್ನು ನೋಡಿ, ಮತಕ್ಕಾಗಿ ಮನೆಗೆ ಒಂದು ದಿನ‌ ಬಂದು ಕುಕ್ಕರ್ ಕೊಟ್ಟು, ಸೀರೆ ಕೊಟ್ಟು ಮತ್ತೆ ಇತ್ತ ತಿರುಗಿ ನೋಡದವರಿಗೆ ಮತ‌ನೀಡಬೇಡಿ. 
ಈ ದೇಶದ ಸುಭದ್ರತೆಗಾಗಿ ಬಹಳ ಬಿಜೆಪಿಗೆ ಮತ ನೀಡಿ ಎಂದರು.

One attachment • Scanned by Gmail