(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.11: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಅವರು ಇಂದು ಇಲ್ಲಿನ 5 ನೇ ವಾರ್ಡಿನ ಕಾಕರ್ಲತೋಟದ ಪ್ರದೇಶದಲ್ಲಿ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿದರು.
ನಮಗೆ ಮತ ನೀಡಿ ನಮ್ಮನ್ನು ಆಯ್ಕೆ ಮಾಡಿ ಮಹಿಳೆಯರ, ಅದರಲ್ಲೂ ವೃದ್ದರ ಯೋಗಕ್ಷೇಮಕ್ಕಾಗಿ ಹಲವಾರು ಯೋಜನೆಗಳ ಪ್ರಣಾಳಿಕೆ ರಚಿಸಿದೆ. ಪ್ರತಿ ತಿಂಗಳು ನಿಮಗೆ ನೀಡುವ ವೃದ್ಯಾಪ್ಯ ವೇತನ ಹೆಚ್ಚಳ ಮಾಡಲಿದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪರ್ವಿನ್ ಬಾನು, ಹಗರಿ ಶಿವಾರೆಡ್ಡಿ ಮಹಿಳಾ ಶಕ್ತಿ ಘಟಕದ ಅಧ್ಯಕ್ಷೆ ಹಂಪಿ ರಮಣಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನ ಆಚಾರ್, ಅಸುಂಡಿ ಸೂರಿ, ಪ್ರಸಾದ್ ರುದ್ರಯ್ಯ, ಚೌದರಿ, ರಾಮಾಂಜನೇಯಲು, ಎಂ ಸೋಮಶೇಖರ್, ಅಂಬರೀಶ್, ಕೆ. ರಮೇಶ್, ಸುಧಾಕರ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.