ವೃದ್ದರು, ವಿಕಲಚೇತನರಿಂದ ಮತದಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.29: ನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು 80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನರಿಗೆ ಮನೆಯಲ್ಲೇ ಮತದಾನ‌ ಮಾಡುವ ವ್ಯವಸ್ಥೆ ಮಾಡಲಾಗಿತ್ತು.
ಮತಗಟ್ಟೆಗೆ ಬಂದು ಮತದಾನ‌ ಮಾಡಲು ಆಗಲ್ಲ ಎನ್ನುವ 158  ಜನ ವೃದ್ದರು, ವಿಕಲಚೇತನರು ಅರ್ಜಿ ಸಲ್ಲಿಸಿದ್ದರು. ಅವರ ಬಳಿಗೆ ಇಂದು ಜಿಲ್ಲಾಡಳಿತದ ಸಿಬ್ಬಂದಿ ತೆರಳಿ ಗುಪ್ತ ಮತದಾನ‌ ಮಾಡಿ ಬಾಕ್ಸ್ ನಲ್ಲಿ ಹಾಕುವಂತೆ ಮಾಡಿದೆ. 
ಅರ್ಜಿ ಸಲ್ಲಿಸಿದ್ದವರಲ್ಲಿ ಕೆಲವರು ಸತ್ತಿರುವ ಬಗ್ಗೆ ಸಹ‌ ಮಾಹಿತಿ ಬಂದಿದೆ.
ಈ ರೀತಿ‌ ಮತದಾನ ಮಾಡುವವರಿಗೂ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷದಿಂದ ಸೂಕ್ತ ವ್ಯವಸ್ಥೆ ಮಾಡಿದೆಯೆಂದು ತಿಳಿದು ಬಂದಿದೆ.
ಈ ರೀತಿ ವ್ಯವಸ್ಥೆ ಇದೇ ಮೊದಲ‌ ಬಾರಿಗೆ ನಡೆದಿದ್ದು ಸ್ಪರ್ಧಾ ಕಣದಲ್ಲಿರುವ ಕೆಲ‌ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಈ ಬಗ್ಗೆ ತಿಳಿದಿಲ್ಲವಂತೆ.
ಇದೇ ರೀತಿ ಇನ್ನಿತರ ಕ್ಷೇತ್ರಗಳಲ್ಲೂ ನಡೆದಿದೆಯಂತೆ.