ವೃದ್ದರಿಗೆ ಬಿಸಿಜಿ ಲಸಿಕೆ ರಾಮಬಾಣ

ನವದೆಹಲಿ,ಅ.೨೯- ಕೊರೋನೋ ಸೋಂಕಿನಿಂದ ಬಳಲುತ್ತಿರುವ ವಯೋವೃದ್ದರಿಗೆ ರಕ್ಷಣೆ ನೀಡುವಲ್ಲಿ ಬಿಸಿಜಿ ಲಸಿಕೆ ಸಹಕಾರಿಯಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.ಸೋಂಕಿನಿಂದ ಬಳಲುತ್ತಿರುವ ೬೦ ರಿಂದ ೮೦ ವರ್ಷ ವಯೋಮಾನದ ಹಿರಿಯ ನಾಗರಿಕರಿಗೆ ರಕ್ಷಣೆ ನೀಡುವಲ್ಲಿ ಬಿಸಿಜಿ ಸಹಕಾರಿಯಾಗಲಿದೆ ಎಂದು ಐಸಿಎಂಆರ್ ಸಂಶೋಧನೆಯಿಂದ ಕಂಡುಕೊಂಡಿದೆ.ಬಿಸಿಜಿ ಲಸಿಕೆ ಕೊರೋನಾ ಸೋಂಕಿತ ವಯೋವೃದ್ಧರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ತನ್ನ ಸಂಶೋಧನೆಯಿಂದ ಪತ್ತೆಮಾಡಿದೆ.ಕೊರೋನಾ ಸೋಂಕಿತ ವಯೋವೃದ್ಧರಲ್ಲಿ ಬಿಸಿಜಿ ಲಸಿಕೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುರಿತು ೧೯ ಮಂದಿಯ ಮೇಲೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಮೀಕ್ಷೆ ನಡೆಸಿತ್ತು .ಸಮೀಕ್ಷೆಯಲ್ಲಿ ಕೊರೋನಾ ಸೋಂಕಿತ ರೋಗಿಗಳು ಚಿಕಿತ್ಸೆ ಕಂಡಿದ್ದರು ಇದನ್ನು ಆಧರಿಸಿ ಈ ಮಾಹಿತಿ ನೀಡಲಾಗಿದೆ.೬೦ ವರ್ಷ ದಾಟಿದ ಹಿರಿಯ ನಾಗರಿಕರಲ್ಲಿ ಮಧುಮೇಹ ಅಧಿಕ ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆ ಮೂತ್ರಪಿಂಡ ಸಮಸ್ಯೆ ಸೇರಿದಂತೆ ಇನ್ನಿತರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ ಅಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎನ್ನುವ ಸಂಗತಿಯನ್ನು ಹೊರಹಾಕಿದೆ.ನವಜಾತ ಶಿಶುಗಳಿಗೆ ರೋಗ ಬರದಂತೆ ತಡೆಯಲು ಕಳೆದ ಐವತ್ತು ವರ್ಷಗಳಿಂದ ಬಿಸಿಜಿ ಚುಚ್ಚುಮದ್ದು ಹಾಕಲಾಗುತ್ತಿದೆ ಇದೀಗ ಅದನ್ನು ಕೊರೋನಾ ಸೋಂಕಿತರಲ್ಲಿ ಬಳಸಲಾಗುತ್ತಿದೆ.ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟಾರೆ ೮೬ ಮಂದಿ ಸಂಶೋಧನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಇದರಲ್ಲಿ ೩೨ ಮತ್ತು ೫೪ ವರ್ಷ ವಯೋಮಾನದವರು ಇದ್ದರು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.ಸಂಶೋಧನೆಗೆ ಒಳಗಾದವರ ಬಗ್ಗೆ ೬೫ ವರ್ಷ ಆಸುಪಾಸಿನ ಮತ್ತು ೬೫ ವರ್ಷ ಒಳಗಿನ ಜನರು ಪಾಲ್ಗೊಂಡಿದ್ದರು ಪ್ರಯೋಗ ಮಾಡಿ ಆನಂತರ ಈ ವಿಷಯವನ್ನು ಹೊರ ಹಾಕಲಾಗಿದೆ ಎಂದು ಅವರು ತಿಳಿಸಿದೆ.ಹಿರಿಯ ನಾಗರಿಕರಲ್ಲಿ ಬಿಸಿಜಿ ಲಸಿಕೆ ರಾಮಬಾಣವಾಗಿ ಗೋಚರಿಸಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ