ವೃತ್ತಿ ಸಾಮಥ್ರ್ಯ ಹೆಚ್ಚಿಸುವ ನಿಷ್ಠಾ ತರಬೇತಿ

ಮುದ್ದೇಬಿಹಾಳ ನ 8:ನಿಷ್ಠಾ ತರಬೇತಿಯು ಉಳಿದೆಲ್ಲ ತರಬೇತಿಗಿಂತ ವಿಶಿಷ್ಟವಾದ ತರಬೇತಿಯಾಗಿದ್ದು, ಶಿಕ್ಷಕರ ವೃತ್ತಿ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ, ಜ್ಞಾನ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರೇಶ ಜಾವರಾಗಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿಷ್ಠಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಇಲ್ಲಿಯವರೆಗಿನ ತರಬೇತಿಗಳು ಸಂಪನ್ಮೂಲ ವ್ಯಕ್ತಿಗಳಿಂದ ಕೊಡಲಾಗುತ್ತಿತ್ತು. ಆದರೆ ಈ ತರಬೇತಿಯು ಸ್ವ ಕಲಿಕೆಯ ತರಬೇತಿಯಾಗಿದೆ.ದೀಕ್ಷಾ ಆಪ್ ನಲ್ಲಿ ಲಾಗಿನ್ ಆಗಿ, ಶಿಕ್ಷಕರೆ ಮಾಡ್ಯೂಲ್ ಗಳನ್ನು ಆಯ್ಕೆ ಮಾಡಿಕೊಂಡು, ತಿಳಿಸಲಾದ ಅವಧಿಯಲ್ಲಿ ಓದಿ ಮುಕ್ತಾಯಗೊಳಿಸಬೇಕಾಗಿದೆ. ಒಟ್ಟು 18 ಮಾಡ್ಯೂಲ್ ಗಳು ಇದ್ದು, 15 ದಿನಕ್ಕೆ 3 ಮಾಡ್ಯೂಲ್ ಗಳನ್ನು ಮುಕ್ತಾಯಗೊಳಿಸಬೇಕು. ಪ್ರತಿ ಒಂದು ಮಾಡ್ಯೂಲ್ ಗಳನ್ನು ನೀವು ಓದಿ ಮುಗಿಸಿದ ನಂತರ ನಿಮಗೆ ಒಂದು ಪ್ರಮಾಣ ಪತ್ರವು ದೀಕ್ಷಾ ಆಪ್ ನಲ್ಲಿ ದೊರೆಯುತ್ತದೆ. ಆ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು ಜೋಪಾನವಾಗಿ ಕಾಯ್ದ ಇಟ್ಟುಕೊಳ್ಳಬೇಕು.
ಪ್ರತಿ ಮಾಡ್ಯೂಲ್ ಮುಕ್ತಾಯದ ನಂತರ ಅಲ್ಲಿ ಕೆಲವು ಬಿಟ್ಟ ಸ್ಥಳ, ರಸ ಪ್ರಶ್ನೆ ಮುಂತಾದ ಮಾದರಿಯ ಚಟುವಟಿಕೆಗಳನ್ನು ನೀಡಲಾಗಿರುತ್ತದೆ. ಆ ಎಲ್ಲಾ ಚಟುವಟಿಕೆಗಳು ಮುಕ್ತಾಯಗೊಳಿಸಿದ ಮಾಡ್ಯೂಲ್ ಗೆ ಸಂಬಂಧಿಸಿದವುಗಳಾಗಿರುತ್ತವೆ. ಹೀಗಾಗಿ ಪ್ರತಿ ಮಾಡ್ಯೂಲ್ ಗಳನ್ನು ಸರಿಯಾಗಿ ಗಮನವಿಟ್ಟು ಓದಿ ಅರ್ಥೈಸಿಕೊಂಡರೆ ಮಾತ್ರ ನೀಡಿದ ಚಟುವಟಿಕೆಗಳಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಯು ಬಿ ಧರಿಕಾರ, ಶಿಕ್ಷಣ ಸಂಯೋಜಕ ಆರ್ ಎಸ್ ದೋಡಮನಿ,ಸಿಆರ್ ಪಿ ಎನ್ ಬಿ ಬರಾದಾರ ಸೇರಿದಂತೆ ಮುದ್ದೇಬಿಹಾಳ ವಲಯದ ಪ್ರಾಥಮಿಕ ಮತ್ರು ಪ್ರೌಡ ಶಾಲೆ ಯ ಮುಖ್ಯಶಿಕ್ಷಕರು ಹಾಗು ಮತ್ತಿತರರು ಇದ್ದರು