ವೃತ್ತಿ ಧರ್ಮ-ಸಂಕಷ್ಟಕ್ಕೆ ಸ್ಪಂದಿಸುವಗುಣಮಹತ್ವದ್ದು

??????

ಪುತ್ತೂರು, ಜೂ.೪- ಕರ್ನಾಟಕ ರಾಜ್ಯ ಶಿಕ್ಷಣ, ಶಿಕ್ಷಕರ ಸಂಘ ಪುತ್ತೂರು ಮತ್ತು ಕಡಬ ತಾಲೂಕಿನ ಶಾಖಾ ಶಿಕ್ಷಕರ ಸಂಘದ ವತಿಯಿಂದ ಕೊರೊನಾ ಸಂಕಷ್ಟದಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ಆಹಾರದ ಕಿಟ್‌ಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಗುರುವಾರ ನಗರದ ತಾಪಂ ಕಿರು ಸಭಾಂಗಣದಲ್ಲಿ ಚಾಲನೆ ನೀಡಿದರು.
ಸಾಂಕೇತಿಕವಾಗಿ ಆಹಾರದ ಕಿಟ್‌ಗಳನ್ನು ವಿತರಿಸಿದ ಶಾಸಕರು, ಕೊರೊನಾ ಸಂದರ್ಭದಲ್ಲಿ ಬದುಕನ್ನು ಎದುರಿಸುವ ನೈತಿಕ ಬೆಂಬಲ ನೀಡುವ ಹಾಗೂ ಎಲ್ಲರನ್ನು ಗೌರವಿಸುವ ಕಾರ್ಯ ಈ ಸಮಾಜದಿಂದ ಆಗಬೇಕು. ಆ ಕೆಲಸವನ್ನು ದೈಹಿಕ ಶಿಕ್ಷಣ ಶಿಕ್ಷಕರು ಮಾಡುತ್ತಿರುವುದು ಉತ್ತಮ ವಿಚಾರ. ತಮ್ಮ ವೃತ್ತಿ ಧರ್ಮ ಪಾಲನೆ ಮಾಡುವ ಜೊತೆಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂದಿಸಿದಾಗ ಶಿಕ್ಷಕ ಬಾಂಧವರನ್ನು ಇಡೀ ಸಮಾಜ ಗೌರವಿಸುತ್ತದೆ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿದರು. ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೊರ್ಮಂಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನವೀನ್ ವೇಗಸ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮೊನಪ್ಪ ಪಟ್ಟೆ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ದೈಹಿಕ ಶಿಕ್ಷಣ ಶಿಕ್ಷಕ ಕಾರ್ಯವನ್ನು ಶ್ಲಾಘಿಸಿದರು.
ಕ್ರೀಡಾನಿಧಿಯನ್ನು ಖಾಸಗಿ ಶಿಕ್ಷಕರಿಗೆ ಬಳಸುವಂತೆ ವಿನಂತಿ
ರಾಜ್ಯ ಮಟ್ಟದಲ್ಲಿ ಕ್ರೀಡಾ ನಿಧಿಯಿದೆ. ಆದರೆ, ಕಳೆದ ೨ ವರ್ಷಗಳಿಂದ ಕ್ರೀಡಾಕೂಟಗಳನ್ನು ಸಮರ್ಪಕವಾಗಿ ಮಾಡಲಾಗದೆ ಕ್ರೀಡಾ ನಿಧಿಯ ಬಳಕೆಯಾಗಿಲ್ಲ. ಈ ನಿಟ್ಟಿನಲ್ಲಿ ಕ್ರೀಡಾ ನಿಧಿಯನ್ನು ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ವೇತನಕ್ಕೆ ಬಳಸುವಂತೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಡಬ ತಾಲೂಕಿನ ಸಂಘದ ಅಧ್ಯಕ್ಷ ಮಾಮಚ್ಚನ್ ಅವರು ಸರ್ಕಾರದ ಜತೆ ಸಮಾಲೋಚನೆ ನಡೆಸುವಂತೆ ಶಾಸಕರಲ್ಲಿ ವಿನಂತಿಸಿದರು.
ಸಂಘದ ಕೋಶಾಧಿಕಾರಿ ಮೋಹನ್ ಪೆರಿಯಡ್ಕ, ಪದಾಧಿಕಾರಿ ವನಿತಾ ಮುಂಡೂರು, ಸಿಆರ್‌ಪಿ ಸ್ಟ್ಯಾನಿ ಪ್ರವೀಣ್, ಬಾಲಕೃಷ್ಣ ರೈ ಒಂತನಡ್ಕ, ಸೀತಾರಾಮ ಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ, ಚಂದ್ರಶೇಖರ್, ವಿಶ್ವೇಶ್ವರ ಭಟ್, ನಯನಾ ವಿ. ರೈ, ಜಯರಾಮ ಗೌಡ ಉಪಸ್ಥಿತರಿದ್ದರು. ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಶ್ರೀಲತಾ ವಂದಿಸಿದರು. ಸಂಘದ ಮಾಜಿ ಕಾರ್ಯದರ್ಶಿ ಪ್ರವೀಣಾ ರೈ ಕಾರ್ಯಕ್ರಮ ನಿರೂಪಿಸಿದರು.

ರೂ.೮೫ ಸಾವಿರ ಮೌಲ್ಯದ ಆಹಾರದ ಕಿಟ್‌ಗಳು
ಕೇವಲ ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ ರವಾನೆಗೆ ದೈಹಿಕ ಶಿಕ್ಷಣ ಶಿಕ್ಷಕರ ಸ್ಪಂದನೆ ಉತ್ತಮವಾಗಿದೆ. ಸುಮಾರು ೭೦ ಮಂದಿ ದೈಹಿಕ ಶಿಕ್ಷಣ ಶಿಕ್ಷರು ತಮ್ಮ ಶಾಲಾ ವ್ಯಾಪ್ತಿಯಲ್ಲಿ ತುಂಬಾ ಸಂಕಷ್ಟದಲ್ಲಿರುವ ಕುಟುಂಬವನ್ನು ಗುರುತಿಸಿರುವ ೮೫ ಫಲಾನುಭವಿಗಳಿಗೆ ಒಟ್ಡು ರೂ. ೮೫ ಸಾವಿರ ಮೌಲ್ಯದ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು. ಸಾಂಕೇತಿಕವಾಗಿ ವಿತರಣೆಯ ಬಳಿಕ ಉಳಿದ ಫಲಾನುಭವಿಗಳಿಗೆ ಮನೆ ಮನೆ ತೆರಳಿ ಆಹಾರದ ಕಿಟ್ ವಿತರಣೆ ಮಾಡಲಾಗುವುದು.
ಮಾಮಚ್ಚನ್, ಅಧ್ಯಕ್ಷರು
ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ