ವೃತ್ತಿ ಜೀವನದಲ್ಲಿ ನಿವೃತ್ತಿ ಅವಿಭಾಜ್ಯ ಅಂಗ

ಭಾಲ್ಕಿ:ನ.23:ವ್ಯಕ್ತಿಯ ವೃತ್ತಿ ಜೀವನದಲ್ಲಿ ನಿವೃತ್ತಿ ಅವಿಭಾಜ್ಯ ಅಂಗವೆಂದು ಉದ್ಘಾಟಕರಾಗಿ ಆಗಮಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೋಳ್ಕರ್ ಅಭಿಪ್ರಾಯಪಟ್ಟರು.
ಪ್ರಿಯದರ್ಶಿನಿ ಅಶೋಕ ಹಿ.ಪ್ರಾ ಹಾಗೂ ಪ್ರೌಢಶಾಲೆ ಕುರುಬಖೇಳಗಿಯಲ್ಲಿ ಶೇಷರಾವ್ ಹುಣಸನಾಳೆ ವಯೋನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ ನಿವೃತ್ತಿಯು ಒಂದುಅಂಗ, ನಂತರವು ನಿಮ್ಮ ಸಾಮಾಜಿಕ ಸೇವೆ ಮುಂದುವರಿಯಲಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಾದಪ್ಪ ಬಿರಾದಾರ್, ಮುಖ್ಯ ಅತಿಥಿ ಬಸವರಾಜ ಧನ್ನೂರೆ ವಹಿಸಿದ್ದರು.ಅನುದಾನಿತ ಪ್ರಾ.ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಗೋವಿಂದರಾವ್ ಬಿರಾದಾರ್, ಬಸವರಾಜ ತೇಗಂಪೂರ್, ಬಿಆರ್ ಪಿ ಗಳಾದ ಸಂತೋಷ ಮುಧೋಳ್, ಆನಂದ ಹಳೆಂಬರೆ , ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕ ನರೇನ್ , ಗ್ರಾಪಂ ಕಾರ್ಯದರ್ಶಿ ಪ್ರಭುಶೆಟ್ಟಿ, ಪ್ರಾಥಮಿಕ, ಪ್ರೌಢ ಶಾಲೆಯ ಮುಖ್ಯಗುರುಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲೆಯ ಮಖ್ಯಗುರು ಸಂದೀಪ ಉಮಾಜಿ ಸ್ವಾಗತಿಸಿದರೆ, ವಿಜಯಲಕ್ಷ್ಮಿ ಬಿರಾದಾರ್ ನಿರೂಪಿಸಿದರು. ಶಿವಶರಣಪ್ಪ ಮಠಪತಿ ವಂದಿಸಿದರು.