ವೃತ್ತಿಯ ಜತೆಗೆ ಸಮಾಜಸೇವೆಯು ಮುಖ್ಯ

ಶಿವಮೊಗ್ಗ.ಮಾ.೨೯; ವೃತ್ತಿಯ ಜತೆಗೆ ಸಮಾಜ ಸೇವೆಯು ಮುಖ್ಯ. ಸೇವೆಯು ನಮ್ಮನ್ನು ಸದಾ ಕಾಪಾಡುತ್ತದೆ. ರೋಟರಿ ಸಂಸ್ಥೆಯು ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ರೋಟರಿ ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಹೇಳಿದರು.ಕೋಣಂದೂರು ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಪಾರಂಪರಿಕ ನಾಟಿ ವೈದ್ಯ ಕೆ.ಆರ್.ಸದಾಶಿವ ಅವರನ್ನು ಸನ್ಮಾನಿಸಿ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಜತೆಯಲ್ಲಿ ವಿಶೇಷ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ ಸುಟ್ಟ ಗಾಯ, ಸರ್ಪಸುತ್ತು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಔಷಧಿ ನೀಡಿ ಗುಣಪಡಿಸುತ್ತಿರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂತಹ ನಾಟಿ ವೈದ್ಯರ ಸೇವೆ ಅತ್ಯಂತ ಅವಶ್ಯಕತೆ ಇದೆ. ಸಂಘ ಸಂಸ್ಥೆಗಳು ಇವರ ಸೇವೆ ಗುರುತಿಸಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಟಿ ವೈದ್ಯ ಕೆ.ಆರ್.ಸದಾಶಿವ ಮಾತನಾಡಿ, ನಾಟಿ ವೈದ್ಯಕೀಯ ಚಿಕಿತ್ಸೆಯಿಂದ ಬಹುತೇಕ ಜನರು ಗುಣಮುಖರಾಗಿದ್ದಾರೆ. ಅಗತ್ಯ ಇರುವವರು ಔಷಧಿ ಪಡೆದುಕೊಳ್ಳಬೇಕು ಎಂದು ಹೇಳಿದರು.ಕೋಣಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಂ.ಟಿ.ಪುಟ್ಟಪ್ಪ ಮಾತನಾಡಿ, ರೋಟರಿ ಸಂಸ್ಥೆಯು ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಸನ್ಮಾನಿಸುತ್ತ ಬಂದಿದೆ. ಸೇವಾ ಕಾರ್ಯಗಳನ್ನು ನಡೆಸಲು ರೋಟರಿ ಸಂಸ್ಥೆಗೆ ಹೆಚ್ಚು ಹೆಚ್ಚು ದೇಣಿಗೆ ನೀಡಬೇಕು ಎಂದು ತಿಳಿಸಿದರು.ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ವಿಜಿತ್, ಕಿರಣ್, ವೀರಪ್ಪ, ವಿಷ್ಣುಮೂರ್ತಿ, ಸುಧೀರ್ ಶೆಟ್ಟಿ, ಸುರೇಶ್, ಧರ್ಮಣ್ಣ, ಈಶ್ವರಣ್ಣ, ರಾಜಶೇಖರ್, ಸುರೇಂದ್ರ, ಗಿರಿಯಪ್ಪ ಗೌಡ, ಮುರುಗೇಂದ್ರಪ್ಪ, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.