ವೃತ್ತಿಯೊಂದಿಗೆ ಸಮಾಜ ಸೇವೆ ಮಾಡುತ್ತಿರುವ ನ್ಯಾಯವಾದಿಗಳಿಗೆ ಸನ್ಮಾನ

ಕಲಬುರಗಿ,ಡಿ.4-ಯಾವುದೆ ಒಬ್ಬ ವ್ಯಕ್ತಿ ಕಾನೂನಿನ ಬಗ್ಗೆ ಅರಿವಿಲ್ಲವೆಂದು ದುಷ್ಕೃತ್ಯವೆಸಗಿದರೆ ಅಂಥವರಿಗೆ ನ್ಯಾಯಾಲಯ ದಂಡಿಸುತ್ತದೆ ಅದಕ್ಕಾಗಿ ಕಾನೂನಿನ ಸಾಮಾನ್ಯ ಜ್ಞಾನ ಹೊಂದಿ ಸರ್ವರು ಸಮೃದ್ಧ ಸಮಾಜ ಕಟ್ಟಬೇಕೆಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ನ್ಯಾಯವಾದಿ ಜ್ಯೋತಿ ಸಂಜೀವಕುಮಾರ ಶೆಟ್ಟಿ ಹೇಳಿದರು.
ಶುಕ್ರವಾರ ಕಲಬುರಗಿ ನಗರದ ಸಂತೋಷ ಕಾಲನಿಯ ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯ ಹನುಮಾನ ದೇವಸ್ಥಾನದ ಆವರಣದಲ್ಲಿ “ನ್ಯಾಯವಾದಿಗಳ ದಿನಾಚರಣೆ” ನಿಮಿತ್ಯ ಜೈಭವಾನಿ ಮಹಿಳಾ ಸಂಘವು ಹಮ್ಮಿಕೊಂಡ ವೃತ್ತಿಯೊಂದಿಗೆ ಸಮಾಜ ಸೇವೆ ಮಾಡುತ್ತಿರುವ ನ್ಯಾಯವಾದಿಗಳಿಗೆ ಗೌರವಿಸುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನ್ಯಾಯವಾದಿಗಳು ಪ್ರತಿಯೊಂದು ವಿಷಯದಲ್ಲಿ ಪಾಂಡಿತ್ಯ ಸಾಧಿಸುವ ಜೊತೆ ಜೊತೆಯಲ್ಲಿ ಸಾಮಾಜಿಕ ಬದ್ಧತೆ, ದೇಶಾಭಿಮಾನ, ಕಾನೂನಿಗೆ ಗೌರವ, ಸಂವಿಧಾನಕ್ಕಿರುವ ಮಹತ್ವ ಮತ್ತು ಮೂಲ ಭೂತ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಾವು ಮಾಡಬೇಕೆಂದು ಮಾರ್ಮಿಕವಾಗಿ ನುಡಿದರು.ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ನಮ್ಮ ವೃತ್ತಿಯಲ್ಲಿ ನಾವು ಎಲ್ಲಾ ವಿಷಯಗಳು ಬಲ್ಲವರೆಂದು ಹೇಳಲಿಕ್ಕೆ ಸಾಧ್ಯವಿಲ್ಲ.ಹೆಚ್ಚು ಹೆಚ್ಚು ಕಾನೂನಿನ ವಿಷಯದಲ್ಲಿ ಆಳವಾಗಿ ಓದಿ ಕಷ್ಟದಲ್ಲಿರುವವರನ್ನು ಸ್ಪಂದಿಸಿ ಜನಸಾಮಾನ್ಯರ ಧ್ವನಿಯಾಗಿ ಸಮೃದ್ಧ ರಾಷ್ಟ್ರ ಕಟ್ಟಬೇಕಾದ ಕರ್ತವ್ಯ ನಮ್ಮದಾಗಿದೆ ಎಂದು ಹೇಳಿದರು.ನ್ಯಾಯವಾದಿ ಕುಮಾರಿ ಶ್ರುತಿ ಭುಜರಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಟೇಲರಿಂಗ್ ಫೆಡರೇಷನ(AITUC) ಜಿಲ್ಲಾಧ್ಯಕ್ಷರಾದ ಅನಿತಾ ಡಿ. ಭಕರೆ ಆಗಮಿಸಿ ಮಾತನಾಡಿದರು. ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಸಂಜೀವ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲಿೢ ಸರೋಜಾ ಸರಡಗಿ, ಸುರೇಖಾ ಸಾವಳಗಿ, ರತ್ನಾಬಾಯಿ ಬುಜರಿ, ನಂದಿನಿ ಚಿಮ್ಮಾ, ಅನ್ನಪೂರ್ಣಾ ಪಾಟೀಲ, ವಿದ್ಯಾ ಹೆಳವರ ಯಾಳಗಿ, ನಿರ್ಮಲಾ ಸಂಗೊಳಗಿ, ಲಲಿತಾಬಾಯಿ ಗೋಲಗೇರಿ, ರೂಪಾ ಪಡನೂರ, ರೇಣುಕಾ ವಾಡಿ, ತಾರಾಬಾಯಿ ಪೂಜಾರಿ, ಸಂಗಮೇಶ ಸರಡಗಿ, ದಿಲೀಪಕೂಮಾರ ಭಕರೆ, ಬಾಲಕೃಷ್ಣ ಕುಲಕರ್ಣಿ, ಶ್ರೀನಿವಾಸ ಬುಜ್ಜಿ, ಅಭಿಷೇಕ ಬಿರಾದಾರ, ಸೂರ್ಯಕಾಂತ ಸಾವಳಗಿ, ರವಿಕುಮಾರ ಗೋಲಗೇರಿ ಸೇರಿದಂತೆ ಬಡಾವಣೆಯ ಹಲವಾರು ಜನ ಭಾಗವಹಿಸಿದ್ದರು. ಶಿಕ್ಷಕರಾದ ಶಿವಕಾಂತ ಚಿಮ್ಮಾ ಸ್ವಾಗತಿಸಿದರು, ರಂಗಭೂಮಿ ಕಲಾವಿದ ರಮೇಶ ಕೋರಿಶೆಟ್ಟಿ ನಿರೂಪಿಸಿದರು,ವಿಶೇಷ ಚೇತನಗಳ ನಾಯಕರಾದ ಬಸವರಾಜ ಹೆಳವರ ಯಾಳಗಿ ವಂದಿಸಿದರು.