ವೃತ್ತಿಯಿಂದ ಮಾತ್ರ ನಿವೃತ್ತಿ, ಪ್ರವೃತ್ತಿಯಿಂದ ಇಲ್ಲ

ಬೀದರ್ ಆ. 5:

ವೃತ್ತಿಯಿಂದ ಮಾತ್ರ ನಿವೃತ್ತಿಯಾಗುವದು, ಪ್ರವೃತ್ತಿಯಿಂದ ಇಲ್ಲ ಎಂದು ವೈಷ್ಣವಿ ಇಂಟರನ್ಯಾಶನಲ್ ಶಾಲೆ ಹಾಗೂ ವಿಶಾಲ ಪಬ್ಲಿಕ್ ಸ್ಕೂಲ್ ನೌಬಾದನ ಆಡಳಿತಾದಿಕಾರಿ ಶರಣಪ್ಪ ಚಂದನಹಳ್ಳಿ ತಿಳಿಸಿದರು.

ಬುಧವಾರ ವಿದ್ಯಾ ವಿಕಾಸ ಅಡಿಯಲ್ಲಿ ನಡೆಯುತ್ತಿರುವ ವೈಷ್ಣವಿ ಇಂಟರನ್ಯಾಶನಲ್ ಆಂಗ್ಲ ಶಾಲೆ ಹಾಗೂ ವಿಶಾಲ ಕನ್ನಡ ಪಬ್ಲಿಕ್ ಸ್ಕೂಲ್ ನೌಬಾದ ಬೀದರದಲ್ಲಿ ಅಲಿಯಾಬಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಾಶೆಪ್ಪ ಚಕಾರೆ ಅವರ ವಯೋನಿÀವೃತ್ತಿ ಸಮಾರಂಭದಲ್ಲಿ ದಂಪತಿಗಳಿಗೆ ಸನ್ಮಾನಿಸಿ ಮಾತನಾಡಿ, ಸರ್ಕಾರದ ನಿಯಮದಂತೆ 60 ವರ್ಷಕ್ಕೆ ನಿವೃತ್ತಿಯಾಗುವುದು ಸಹಜ ಆದರೆ ಅವರ ಕೆಲಸ ಮಾಡುವ ಮನೋಭಾವನೆ ಮೇಲೆ ಅವಲಂಬನೆಯಾಗಿರುತ್ತದೆ. ದೇವರು ಇನ್ನು ಕೆಲಸ ಮಾಡುವ ಶಕ್ತಿ ಕರುಣಿಸಲೆಂದು ನುಡಿದರು.

ಸಿಆರ್‍ಪಿ ಸುನೀಲ ಗಾಯಕವಾಡ ಮಾತನಾಡಿ, ಶಾಲೆಗಳು ಅತೀ ಉತ್ತಮವಾಗಿ ನಡೆಸುತ್ತಿದ್ದು ಮಕ್ಕಳ ಜೀವನಮಟ್ಟ ಸುಧಾರಿಸಲೆಂದು ಹಾರೈಸಿದರು. ಜೀಜಾಮಾತಾ ಪ್ರೌಢ ಶಾಲೆಯ ಮುಖ್ಯಗುರು ಪ್ರಭು ಕಾಳಗೊಂಡ ಮಾತನಾಡಿದರು. ಮೀರಾ ಸತೀಶಕುಮಾರ ಮೂಳೆ ಅಧ್ಯಕ್ಷತೆ ವಹಿಸಿದರು.

ಪ್ರಾಚಾರ್ಯರಾದ ಲಕ್ಷ್ಮಣ ವೈ ಎಮ್, ಜೀಜಾಮಾತಾ ಔಷಧ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಬಸವರಾಜ ಬಳ್ಳೂರ, ವಿಶಾಲ ಪಬ್ಲಿಕ್ ಸ್ಕೂಲ್‍ನ ಮುಖ್ಯಗುರು ವಿಜಯಕುಮಾರ ಪಾಟೀಲ, ವೈಷ್ಣವಿ ಇಂಟರನ್ಯಾಶನಲ್ ಶಾಲೆಯ ಮುಖ್ಯಗುರು ಅಶ್ವಿನಿ ವಿ ದಾಮಾ, ರೂಪಾಲಿ ಸಲಗರೆ, ಬಾಬುರಾವ ಕಾಂಬಳೆ, ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.