ವೃತ್ತಿಯಲ್ಲಿ ಸಮಯಪ್ರಜ್ಞೆ ಮುಖ್ಯ : ಮರಿಲಿಂಗಪ್ಪ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 2 :-  ವೃತ್ತಿ ಜೀವನದಲ್ಲಿ ಸಮಯಪ್ರಜ್ಞೆ ಅತ್ಯಾವಶ್ಯಕವಾಗಿದ್ದು ಅದು ಹಿರಿಯ ಸಹೋದ್ಯೋಗಿಗಳು ಅಳವಡಿಸಿಕೊಂಡಿದ್ದರು. ಈಗಿರುವ ಕಿರಿಯ ಸಹೋದ್ಯೋಗಿಗಳು ಸಹ ಹಿರಿಯರ ಹಾದಿಯಲ್ಲಿ  ಸಮಯಪ್ರಜ್ಞೆ  ಅಳವಡಿಸಿಕೊಂಡಲ್ಲಿ  ತಮ್ಮ ವೃತ್ತಿಜೀವನಕ್ಕೆ  ಅರ್ಥಸಿಗಲಿದೆ ಎಂದು ಕೂಡ್ಲಿಗಿ ಸಾರಿಗೆ ಸಂಸ್ಥೆ  ಪ್ರಭಾರಿ ಘಟಕ ವ್ಯವಸ್ಥಾಪಕ ಮರಿಲಿಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಘಟಕದ ಚಾಲಕರುಗಳಾದ ಕೊಟ್ರೇಶ, ಪಂಪಾಪತಿ ಹಾಗೂ ಸಹಾಯಕ ಕುಶಲಕರ್ಮಿ ಅಶ್ವತ್ ನಾರಾಯಣ ಇವರುಗಳ ನಿವೃತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕಾರ್ಮಿಕರು ಸಾರಿಗೆ ಸಂಸ್ಥೆಯ ಶಕ್ತಿ ಇವರ ಶ್ರಮ ಸಂಸ್ಥೆಯ ಏಳ್ಗೆಗೆ ಸಹಾಯಕವಾಗಿದ್ದು ಇವರ ವೃತ್ತಿ ಜೀವನದಲ್ಲಿ  ಮೂರು ದಶಕಗಳ ಕಾಲ ಸಂಸ್ಥೆಗೆ ಶ್ರಮಿಸಿದ್ದು ಅಲ್ಲದೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಅನೇಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವೃತ್ತಿ ಜೀವನದಲ್ಲಿ ಕಂಡುಂಡ ಸತ್ಯಗಳನ್ನು ನಿವೃತ್ತ ಮೂವರು ನೌಕರರು ಮೆಲುಕು ಹಾಕಿದರು ಅಲ್ಲದೆ ತಮ್ಮ ಸಹೋದ್ಯೋಗಿಗಳಿಂದ ದೂರವಾಗುತ್ತಿರುವ ಬಗ್ಗೆ ಕಂಬನಿ ಮಿಡಿದರು ಮತ್ತು ನಿವೃತ್ತ ನೌಕರರ ಮಕ್ಕಳು ಸಹ ತಂದೆಯ ವೃತ್ತಿಜೀವನದ ಸಮಯ ಸಂಯಮ ತಾಳ್ಮೆ ಬಗ್ಗೆ ಮಕ್ಕಳಿಗೆ ನೀಡಿರುವ ಉನ್ನತ ಶಿಕ್ಷಣ ಉನ್ನತ ಹುದ್ದೆಯ ಕುರಿತು ಪಾಲಕರ ಶ್ರಮವನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಕೂಡ್ಲಿಗಿ ಸಾರಿಗೆ ಸಂಸ್ಥೆಯ ಘಟಕದ ಲೆಕ್ಕ ಪರಿಶೋಧಕ ಶಾಖೆಯ ಮೇಲ್ವಿಚಾರಕ ಮಾರುತಿ, ಸಂಚಾರಿ ನಿರೀಕ್ಷಿಕ ಮಂಜುನಾಥ, ಸಿಬ್ಬಂದಿಗಳಾದ ನಿಶ್ಚಿತಾ ಪಾಟೀಲ್, ತಿಪ್ಪೇಸ್ವಾಮಿ, ಮಂಜುನಾಥ, ಭಾಷಾ,ನಿವೃತ್ತ ಚಾಲಕ ಪಾಂಡುರಂಗಪ್ಪ,ಸ್ವಾತಿ, ಶುಷ್ಮಾ, ಸಂಚಾರಿ ನಿಯಂತ್ರಕರು, ತಾಂತ್ರಿಕ ಸಹಾಯಕರು, ನಿವೃತ್ತ ನೌಕರರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ತಾಂತ್ರಿಕ ಸಹಾಯಕ ನಟರಾಜ ಸ್ವಾಗತಿಸಿ ನಿರೂಪಿಸಿದರು.