ವೃತ್ತಿಯಲ್ಲಿನ ಸಾಧನೆ ಉತ್ತಮ ವ್ಯಕ್ತಿತ್ವಕ್ಕೆ ಕಾರಣವಾಗುತ್ತದೆ: ಸೋಮೇಶ್ವರಾನಂದ ಶ್ರೀಗಳು

ಸೈದಾಪುರ:ಎ.3:ನಾವು ವೃತ್ತಿಯಲ್ಲಿ ಮಾಡಿದ ಸಾಧನೆ ನಿವೃತ್ತಿಯ ನಂತರ ಉತ್ತಮ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಿದ್ಧ ಚೇತನಾಶ್ರಮ ಸಿದ್ಧರೂಢ ಮಠದ ಸೋಮೇಶ್ವರಾನಂದ ಶ್ರೀಗಳು ಅಭಿಪ್ರಾಯಪಟ್ಟರು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಗ್ರಾಮ ಸೈದಾಪುರದಲ್ಲಿ ಹಮ್ಮಿಕೊಂಡ ಮುತ್ತಪ್ಪ ಬಾಲಪ್ಪ ಪೂಜಾರಿ ಶಿಕ್ಷಕ ಅವರ ವಯೋನಿವೃತ್ತಿ ಬೀಳ್ಕೊಡಿಗೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಉತಮ ಪ್ರವೃತ್ತಿಗಳನ್ನು ನಮ್ಮದಾಗಿಸಿಕೊಂಡು ನಿವೃತ್ತಿ ಜೀವನವನ್ನು ಸು:ಖರವಾಗಿ ಕಳೆಯಬೇಕು. ನಮ್ಮ ಕೈಲಾಗುವ ಪ್ರಯತ್ನದೊಂದಿಗೆ ಸಾಮಾಜಿಕ ಸೇವಾ ಮನೋಭಾವನೆಯಲ್ಲಿ ತೊಡಿಸಿಕೊಂಡು ನೆಮ್ಮದಿಯ ಕ್ಷಣಗಳೊಂದಿಗೆ ಬದಕಬೇಕು. ಆರೋಗ್ಯ, ಆಯಸ್ಸು ಭಗವಂತ ನಿಮಗೆ ಕರುಣಿಸಲಿ ಎಂದು ಹಾರೈಸಿದರು.
ಮುಖ್ಯಗುರು ಸಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ಇಸಿಒ ಮಲ್ಲಿಕಾರ್ಜುನ ಕಾವಲಿ, ಸಿಆರ್‍ಪಿ ಮುಕುಂದರಾವ, ಈರಣ್ಣ ಯರಗಟ್ಟಿ, ಡಾ.ಅಮರೇಶ.ಡಿ.ಗೌಡರ, ಗ್ರಾ.ಪಂ.ಅಧ್ಯಕ್ಷ ಮಾಳಪ್ಪ ಅಂಕೇರಿ, ಮಲ್ಲಣ್ಣಗೌಡ ಸೈದಾಪುರ, ಸಂಗಾರೆಡ್ಡಿಗೌಡ, ಚನ್ನರೆಡ್ಡಿಗೌಡ, ಸಿದ್ದಲಿಂಗರೆಡ್ಡಿ ದೇಶಮುಖ, ಬಸವರಾಜ ಸೈದಣ್ಣನವರ, ಗಂಗಾಧರ ಚಂದ್ರಗಿರಿ, ಸಿದ್ದಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಗಡದ, ದಶರಥ ಕಡೇಚೂರ, ಎಸ್‍ಎಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.