ವೃತ್ತಿಪರ ತರಬೇತಿ ಶಿಬಿರ

ಪಾವಗಡ, ಮಾ. ೨೩- ತಾಲ್ಲೂಕಿನಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವತಿಯಿಂದ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್ , ವ್ಯಕ್ತಿತ್ವ ವಿಕಸನ , ಜೀವನ ಕೌಶಲ್ಯ ಹಾಗೂ ವೃತ್ತಿಪರ ತರಬೇತಿಗಳನ್ನು ನೀಡುವ ಕುರಿತು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಮೇಲ್ವಿಚಾರಕಿ ಮಂಜುಳ, ಯುಕ್ತ ಒSಙಇP ಶ್ರೀನಿವಾಸ್, ನಿರ್ದೇಶಕ ದಿಲೀಪ್‌ಕುಮಾರ್, ಜಿಲ್ಲಾ ಕಾರ್ಯಕ್ರಮ ಆಯೋಜಕಿ ದೀಪಿಕಾ, ವಿನೋದ್, ವೆಂಕಟೇಶ್‌ಬಾಬು, ಮಹಮದ್ ವಸೀಯುಲ್ಲಾ, ರಾಜೇಶ್ವರಿ, ನಂದಿನಿ ಮತ್ತಿತರರು ಉಪಸ್ಥಿತರಿದ್ದರು.