ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ಪರೀಕ್ಷೆ


ಧಾರವಾಡ, ಮೇ.19: ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ಜರುಗುವ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ 2023 ನೇ ಸಾಲಿನ ಸಾಮಾನ್ಯ ಪರೀಕ್ಷೆಗಳು ಮೇ.20 ಹಾಗೂ 21 ರಂದು ಜರುಗಲಿವೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಜರುಗಿಸಿ, ಕೆ-ಸಿಇಟಿ ಸಿದ್ಧತೆ ಪರಿಶೀಲಿಸಿ ಮಾತನಾಡಿದರು.

ಮೇ 20 ಮತ್ತು 21 ರಂದು ಪರೀಕ್ಷೆಯ 1ನೇ ಅಧಿವೇಶನ 10-30 ದಿಂದ 11-50 ಹಾಗೂ 2ನೇ ಅಧಿವೇಶನ 2-30 ರಿಂದ 3-50 ರವರೆಗೆ ನಡೆಯಲಿವೆ. ಒಟ್ಟು 11,101 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಧಾರವಾಡ-16, ಹುಬ್ಬಳ್ಳಿ-13 ಸೇರಿ ಒಟ್ಟು-29 ಪರೀಕ್ಷಾ ಕೇಂದ್ರಗಳಿವೆ. ಧಾರವಾಡ ಹಾಗೂ ಹುಬ್ಬಳ್ಳಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿ ತಾಲ್ಲೂಕಿಗೆ ತಹಶೀಲದಾರ ರವರನ್ನು ಒಳಗೊಂಡಂತೆ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಹಾಗೂ ಪ್ರಶ್ನೆ ಪತ್ರಿಕೆಗಳನ್ನು ವಿತರಣೆ ಮಾಡಲು ಹಾಗೂ ಪರೀಕ್ಷೆ ಮುಗಿದ ನಂತರ ಪರೀಕ್ಷಾ ಸಾಮಗ್ರಿಗಳನ್ನು ಜಿಲ್ಲಾ ತ್ರಿಸದಸ್ಯ ಸಮಿತಿಗೆ ಒಪ್ಪಿಸಲು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಮಾರ್ಗಗಳ ಒಂದನೇ ತಂಡದ ಅಧಿಕಾರಿರವರು ತಮ್ಮ ಕಛೇರಿ ವಾಹನವನ್ನು ಪಡೆದು ಪರೀಕ್ಷಾ ಕಾರ್ಯಕ್ಕೆ ಉಪಯೋಗಿಸಬೇಕು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸಹಾಯಕ ಕಮೀಶನರ್ ಹುದ್ದೆಗಿಂತ ಕಡಿಮೆ ಅಲ್ಲದ ಒಟ್ಟು 29 ವಿವಿಧ ಕಾಲೇಜುಗಳ ಪ್ರಾಧ್ಯಾಪಕರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ 24 ಅಭ್ಯರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕರನ್ನು ನೇಮಿಸಿದೆ. ವಿಜ್ಞಾನ ವಿಷಯದ ಉಪನ್ಯಾಸಕರನ್ನು ಕೊಠಡಿ ಮೇಲ್ವಿಚಾಕರನ್ನಾಗಿ ನೇಮಿಸಿಕೊಳ್ಳದಂತೆ ಕ್ರಮ ವಹಿಸಿದೆ ಎಂದು ಅವರು ಹೇಳಿದರು.

ಪೆÇಲೀಸ್ ಆಯುಕ್ತರು ಮತ್ತು ಪೆÇಲೀಸ್ ವರಿμÁ್ಠಧಿಕಾರಿಗಳು ಪೆÇಲೀಸ್ ಬಿಗಿಬಂದೋಬಸ್ತಗಳ ಬಗ್ಗೆ ಸೂಕ್ತ ಕ್ರಮ ವಹಿಸಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು, ಕಂಪ್ಯೂಟರ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ ಮಾಡಲು ಕ್ರಮ ಜರುಗಿಸಲಾಗಿದೆ. ಹಾಗೂ ನಿಷೇದಾಜ್ಞೆ ಜಾರಿ ಮಾಡಲಾಗುವುದು. ಈಗಾಗಲೇ ಗುರುತಿಸಿದ ಮಾರ್ಗಗಳಿಗೆ ಮಾರ್ಗ ಭದ್ರತೆ ಒದಗಿಸಲು ಒಟ್ಟು 8 ಜನ ಸಶಸ್ತ್ರ ಪೊಲೀಸ್ ಸಿಬ್ಬಂದಿ ನೇಮಿಸಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲಾಗುವುದು.
ಹೆಸ್ಕಾಂನವರು ಪರೀಕ್ಷಾ ದಿನಗಳಂದು ತಡೆರಹಿತ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಸ್ರಚಿಸಿದರು.

ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಾ ನಾಯಕ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಧಾರವಾಡ ಹಾಗೂ ಹುಬ್ಬಳ್ಳಿ ನಗರ ತಹಶೀಲದಾರರು ಹಾಗೂ ಮಾರ್ಗಾಧಿಕಾರಿಗಳು, ಹೆಸ್ಕಾಂ, ಪೊಲೀಸ್ ಹಾಗೂ ಖಜಾನೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ, ಧಾರವಾಡ ಪರೀಕ್ಷಾ ವಿಭಾಗದ ಸಿಬ್ಬಂದಿಗಳು ಇದ್ದರು.