ವೃತ್ತಿಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ವೈದ್ಯರ ಕರ್ತವ್ಯ

(ಸಂಜೆವಾಣಿ ವಾರ್ತೆ)
ಶಿರಹಟ್ಟಿ,ಜು4: ವೈದ್ಯ ವೃತ್ತಿ ಸಮಾಜದಲ್ಲಿ ಹೆಚ್ಚು ಗೌರವ ಹೊಂದಿದ್ದು, ಅದರ ಘನತೆ ಸದಾ ಕಾಲ ಎತ್ತಿ ಹಿಡಿಯಲು ವೈದ್ಯನಾದವನು ವೃತ್ತಿ ಕೌಶಲ್ಯ, ತಾಳ್ಮೆ ಹಾಗೂ ಸಮಯ ಪ್ರಜ್ಞೆ ಬೆಳೆಸಿಕೊಂಡು ಜನರ ಆರೋಗ್ಯ ಸಮಸ್ಯೆಗಳಿಗೆ ಉತ್ತರದಾಯಿ ಆಗಬೇಕು. ವೃತ್ತಿ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬರ ವೈದ್ಯರ ಕರ್ತವ್ಯವಾಗಿದೆ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಸಿ.ಸಿ.ಎನ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ವೈದ್ಯರ ಸಂಘ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದಲ್ಲಿ ಸಾಮಾನ್ಯ ಜನರಿಗೂ ಉತ್ಕøಷ್ಟ ಆರೋಗ್ಯ ಸೇವೆ ಸದಾಕಾಲ ದೊರೆಯಬೇಕು. ಉತ್ತಮ ಆರೋಗ್ಯಕ್ಕೆ ಯೋಗಾಸನ ಅಭ್ಯಾಸ ಮಾಡಬೇಕು. ಕೊರೊನಾ ಸಂಕಷ್ಟ ಸಮಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಭಯ ಭೀತರಾಗದೆ ಸೋಂಕಿತ ಮತ್ತು ಶಂಕಿತರಿಗೂ ಚಿಕಿತ್ಸೆ ನೀಡುವ ಮೂಲಕ ಜೀವದ ಹಂಗು ತೊರೆದು ಸೇವೆ ಮಾಡಿದ್ದು, ಜನರು ಮರೆಯದಂತಾಗಿದೆ. ಕೇವಲ ಹಣದ ಆಶೆಗೆ ಒಳಪಡದೇ ನಿಜವಾದ ವೃತ್ತಿ ಧರ್ಮವನ್ನು ಪಾಲಿಸುವುದು ಅಗತ್ಯವಿದೆ. ವೈದ್ಯರ ಮೇಲಿನ ಅಪವಾದಗಳು ಕಡಿಮೆಯಾಗುವ ರೀತಿಯಲ್ಲಿ ವೃತ್ತಿ ನಡೆಸುವುದು ಅಗತ್ಯವಿದೆ ಎಂದು ಹೇಳಿದರು.

ಇದೇ ವೇಳೆ ಸಂಘದ ನೂತನ ಅಧ್ಯಕ್ಷರಾಗಿ ಡಾ ಸುನೀಲ ಬುರುಬುರೆ ಹಾಗೂ ಕಾರ್ಯದರ್ಶಿಯಾಗಿ ಡಾ ಪವನ ಟಿ ಮಹೆಂದ್ರಕರ ಅವರ ತಂಡ ಅಧಿಕಾರ ಸ್ವೀಕರಿಸಿತು.

ಈ ವೇಳೆ ಹಿರಿಯ ವೈದ್ಯ ಡಾ. ಮಲ್ಲಾಡದ, ಜಿಲ್ಲಾ ಆಯುμï ಅಧಿಕಾರಿ ಡಾ. ಉಪ್ಪಿನ, ಡಾ. ತೋಟದ, ಡಾ. ಹೂವಿನ ಡಾ.ಸುನೀಲ ಬರುಬುರೆ, ಡಾ.ರಾಜಶೇಖರ ಬಶೆಟ್ಟಿ, ಡಾ. ಎಸ್. ಕೆ. ಅವರೆಡ್ಡಿ, ಡಾ.ಎಸ್.ಕೆ.ಹೆಬ್ಬಳ್ಳಿ,ಡಾ. ವಿಜಯದತ್ತ ಮಂಗಸೂಳಿ, ಡಾ. ಅಬ್ದುಲ್ ಢಾಲಯತ, ಡಾ.ಪ್ರವೀಣ ಮುಳ್ಳುರ, ಡಾ. ಶರಣಪ್ಪ ಬಿಂಕದಕಟ್ಟಿ, ಡಾ.ಶರಣು ಮಠದ ಚಂಧ್ರು ನೂರಶೆಟ್ಟರ ಉಪಸ್ಥಿತರಿದ್ದರು.