ವೃತ್ತಪರ ಕೌಶಲ್ಯ ವೃದ್ಧಿಸಿಕೊಳ್ಳಲು ಕರೆ

ಗದಗ, ಸೆ20: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಶ್ರೀಮತಿ ಪಾರ್ವತೆಮ್ಮ ಮತ್ತು ಶ್ರೀ ಶಂಕ್ರಪ್ಪ ಎಸ್ ಮೈಲಾರ ಸ್ಮಾರಕ ಸರ್ಕಾರಿ ಐ.ಟಿ.ಐ ಹೊಂಬಳ ಇಲ್ಲಿ 2020-22 ನೇ ಸಾಲಿನ ಎರಡನೇ ವರ್ಷದ ಕೋರ್ಸಗಳಲ್ಲಿ ಉತ್ತೀರ್ಣರಾದ ತರಬೇತಿದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (ಎನ್.ಟಿ.ಸಿ) ವಿತರಿಸುವ ಘಟಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಹೊಂಬಳ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಬಸವರಾಜ ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸಿ, ವೃತ್ತಿಪರ ಕೌಶಲ್ಯತೆ ಹೆಚ್ಚಿಸಿಕೊಳ್ಳುವುದು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಅವಶ್ಯಕವಾಗಿದೆ. ಎಲ್ಲರೂ ಉದ್ಯೋಗ ಪಡೆದುಕೊಂಡು ಸ್ವಾವಲಂಭಿಗಳಾಗಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಂಬಳ ಗ್ರಾಮದ ಸಂಸ್ಥೆಗೆ ಭೂ ದಾನ ಮಾಡಿದ ಶೇಖರಪ್ಪ ಕುಷ್ಟಗಿ ಅವರು ಐ.ಟಿ.ಐ ವೃತ್ತಿ ಹೊಂದಿದ ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿ ಇದ್ದಾರೆ ಎಂದು ತಿಳಿಸಿ ಸಂಸ್ಥೆಯ ಬೆಳವಣಿಗೆ ಹಾಗೂ ತರಬೇತಿದಾರರು ಪಾಸಾಗಿ ಒಳ್ಳೆಯ ಕೆಲಸವನ್ನು ಮಾಡಬೇಕೆಂದು ಹಾರೈಸಿದರು.
ನಾರಾಯಣ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಎರಡು ವೃತ್ತಿಗಳಲ್ಲಿ ಪಾಸಾದ ತರಬೇತಿದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಥೆಯ ಐ.ಎಸ್ ಸಂಗಮಕರ, ಪ್ರದಸ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.