ವೃತ್ತಕ್ಕೆ ಶ್ರೀಮಂತಿ ಸಾವಿತ್ರಿಬಾಯಿ ಬಾಪುಲೆನಾಮಕರಣ ಮಾಡಲು ಮನವಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.16: ನಗರದ ಆದಿದೇವತೆಯಾದ ಶ್ರೀ ಕನಕದುರ್ಗಮ್ಮ ದೇವಿಯನ್ನು ನಿತ್ಯವು ಹೇಗೆ ಸ್ಮರಿಸುತ್ತೇವೆಯೋ ಅದೇ ರೀತಿ ವಿದ್ಯಾ ದೇವತೆಯಾದ ಶ್ರೀಮತಿ ಸಾವಿತ್ರಿಬಾಯಿ ಬಾಪುಲೆ ಯವರ  ಹೆಸರನ್ನು ಸ್ಮರಿಸುವುದಕ್ಕೆ ಶ್ರೀ ಕನಕ ದುರ್ಗಮ್ಮ ದೇವಿ ದೇವಸ್ಥಾನದ ಹತ್ತಿರ ಹೊಸದಾಗಿ ನಿರ್ಮಾಣವಾಗಿರುವ ವೃತ್ತಕ್ಕೆ ಶ್ರೀಮತಿ ಸಾವಿತ್ರಿಬಾಯಿ ಬಾಪುಲೆ ಎಂದು ನಾಮಕರಣವನ್ನು ಮಾಡಲು ಯುವ ಸೇನೆ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ಮನವಿ ಮಾಡಿದರು.
ಈ ಕುರಿತಂತೆ ಪಾಲಿಕೆಯ ಆಯುಕ್ತರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಬಳ್ಳಾರಿ ನಗರದ ಪ್ರಮುಖ ವೃತ್ತಗಳು ಆಗಿರುವ ಗಡಿಗಿ ಚನ್ನಪ್ಪ, ಹೆಚ್.ಆರ್.ಗವಿಯಪ್ಪ ಮತ್ತು ಗೋಪಾಲಸ್ವಾಮಿ ರಸ್ತೆ, ಡಾ|| ರಾಜ್‍ಕುಮಾರ್‍ರವರ ಪುತ್ಥಳಿ ಮತ್ತು ರಸ್ತೆ, ಕ್ರೀಡಾ ಮೈದಾನಕ್ಕೆ ಪುನಿತ್‍ರಾಜ್ ಕುಮಾರ್‍ರವರ ಹೆಸರು ಮತ್ತು ಪುತ್ಥಳಿ, ಉದ್ಯಾನವನಕ್ಕೆ ಡಾ|| ವಿಷ್ಣುವರ್ಧನ ಉದ್ಯಾನವನ, ಅಷ್ಟೇಅಲ್ಲದೇ ಬಳ್ಳಾರಿಯಲ್ಲಿ ವಿಶ್ವವಿದ್ಯಾಲಯಕ್ಕೆ ‘ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ ಎಂಬ ನಾಮಕರಣ ಮಾಡಿದ್ದೀರಿ. ಇವೆಲ್ಲಾ ಪುರುಷರ ಹೆಸರಿನಲ್ಲಿಯೇ ಇವೆ.
ಆದರೆ ಬಳ್ಳಾರಿ ನಗರದಲ್ಲಿ ಕೇವಲ ಒಂದೇ ಒಂದು ವೃತ್ತಕ್ಕೆ ಮಾತ್ರ ಮಹಿಳೆಯ ಹೆಸರು ಇಂದಿರಾಗಾಂಧಿ ವೃತ್ತ ಎಂದು ನಾಮಕರಣ ಮಾಡಿದ್ದು, ಅದಕ್ಕೆ ಯಾವುದೇ ನಾಮಫಲಕ ಹಾಕಿರುವುದಿಲ್ಲ, ಈಗ ಕಾಂಗ್ರೆಸ್ ಆಡಳಿತ ಅಧಿಕಾರಿಗಳು ಹಾಗೂ ಕಾಂಗ್ರೆಸ್ ರಾಜಕೀಯ ನಾಯಕರು ನಿರ್ವಹಣೆ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಆದರೆ ಅದನ್ನು ಇದುವರೆಗೂ ಯಾರೂ ಸಹ ಇಂದಿರಾಗಾಂಧಿ ವೃತ್ತ ಎಂದು ಕರೆಯುವುದಿಲ್ಲ, ಹಳೇ ಚಿತ್ರಮಂದಿರದ ಹೆಸರನ್ನೇ ಅಂದರೆ ಸಂಗಮ್ ಸರ್ಕಲ್ ಎಂತಲೇ ಕರೆಯುತ್ತಾರೆ. ಇಂದಿರಾಗಾಂಧಿ ವೃತ್ತ ಬಿಟ್ಟರೆ ಬಳ್ಳಾರಿ ನಗರದ ಯಾವುದೇ ರಸ್ತ್ತೆಗಾಗಲೀ, ಉದ್ಯಾನವನಕ್ಕಾಗಲೀ, ವೃತ್ತಕ್ಕಾಗಲೀ, ದೇಶದ ಪ್ರಮುಖ ಮಹಿಳೆಯ ಹೆಸರನ್ನು ಮತ್ತೆಲ್ಲಿ ನಾಮಕರಣ ಮಾಡಿರುವುದಿಲ್ಲ. 
ಆದ್ದರಿಂದ ಬಳ್ಳಾರಿ ಗ್ರಾಮ ದೇವತೆಯಾದಂತಹ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಹತ್ತಿರ ರಸ್ತೆ ಅಗಲೀಕರಣ ಹಾಗಿರುವ ಪ್ರದೇಶದಲ್ಲಿ ಕನಕ ದುರ್ಗಮ್ಮ ಒಬ್ಬ ಮಹಿಳಾ ದೇವತೆ, ಅದೇ ರೀತಿ ಶ್ರೀಮತಿ ಸಾವಿತ್ರಿಬಾಯಿ ಬಾಪುಲೆಯವರು ಸಹ ಇಡೀ ಭಾರತ ದೇಶದ ವಿದ್ಯಾಮಾತೆ ಆಗಿದ್ದರಿಂದ ಈ ವೃತ್ತಕ್ಕೆ ‘ಶ್ರೀಮತಿ ಸಾವಿತ್ರಿಬಾಯಿ ಬಾಪುಲೆ‘ ವೃತ್ತ ಎಂದು ನಾಮಕರಣ ಮಾಡಿ ಮತ್ತು ಈ ವೃತ್ತದಲ್ಲಿ ಅವರ ಪುತ್ಥಳಿಯನ್ನು ಸ್ಥಾಪನೆ ಮಾಡಬೇಕೆಂದು ಮನವಿ ಮಾಡಿದೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷ  ಮೇಕಲ ಈಶ್ವರರೆಡ್ಡಿ, ಕಾರ್ಯಕರ್ತರು:ಎಸ್.ಕೃಷ್ಣ, ಜಿ.ಎಂ. ಭಾಷ,ಪಿ.ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ                 
ಶ್ರೀನಿವಾಸರೆಡ್ಡಿ.ಎಂ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಕೆ.ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಇದ್ದರು.