ವೃಕ್ಷ ಮಾತೆ ತುಳಸಿ, ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಕಾಲಿಗೆ ನಮಸ್ಕರಿಸಿದ ಮೋದಿ

ಅಂಕೋಲಾ,ಮೇ.3- ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಬಿಜೆಪಿ ಪರ ಮತಯಾಚಿಸಿದ ಮೋದಿ, ವೃಕ್ಷ ಮಾತೆಯರ ಪಾದಚರಣಗಳಿಗೆ ಎರಗಿ ಗಮನ ಸೆಳೆದಿದ್ದಾರೆ.
ವೃಕ್ಷ ಮಾತೆ ತುಳಸೀಗೌಡ, ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರಿಗೆ ಅಂಕೋಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಆಗಲು ಅವಕಾಶ ಕಲ್ಪಿಸಲಾಯಿತು. ಈ ವೇಳೆ ತಮ್ಮನ್ನು ಭೇಟಿಯಾದ ವೃಕ್ಷ ಮಾತೆ ತುಳಸೀಗೌಡ, ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಪಾದಕ್ಕೆ ಬಿದ್ದು ಪ್ರಧಾನಿ ಮೋದಿ ನಮಸ್ಕರಿಸಿದ್ದಾರೆ.
ಮೋದಿ ಭೇಟಿ ವೇಳೆ ಸುಕ್ರಿ ಬೊಮ್ಮಗೌಡ ಅವರು ಮೊದಲಿಗೆ ಪ್ರಧಾನಿಯ ಕಾಲಿಗೆ ನಮಸ್ಕರಿಸಿದರು. ಇದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಅವರು ಸುಕ್ರಿ ಬೊಮ್ಮಗೌಡ ಹಾಗೂ ತುಳಸೀಗೌಡ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದ ಸಾಧಕಿಯರು ಇವರು. ತುಳಸಿ ಗೌಡ ಅವರು ರಾಜ್ಯದ ವೃಕ್ಷ ಮಾತೆ ಎಂದೇ ಪ್ರಸಿದ್ಧಿ. ಸುಕ್ರಿ ಬೊಮ್ಮಗೌಡ ಜಾನಪದ ಕೋಗಿಲೆ ಎಂದೇ ಖ್ಯಾತಿ ಪಡೆದವರು. ಇವರಿಬ್ಬರಿಗೂ ನಾಡೋಜ ಹಾಗೂ ಪದ್ಮ ಶ್ರೀ ಗೌರವ ಲಭಿಸಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವೃಕ್ಷ ಮಾತೆ ತುಳಸೀಗೌಡ, ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಪಾದಕ್ಕೆ ಬಿದ್ದು ನಮಸ್ಕರಿಸಿದ್ದಾರೆ. ಮೋದಿ ಭೇಟಿ ವೇಳೆ ಸುಕ್ರಿ ಬೊಮ್ಮಗೌಡ ಅವರು ಪ್ರಧಾನಿಯ ಕಾಲಿಗೆ ನಮಸ್ಕರಿಸಿದರು. ಇದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಅವರು ಸುಕ್ರಿ ಬೊಮ್ಮಗೌಡ ಅವರಿಗೆ ನಮಸ್ಕರಿಸಿದರು.