`ವೃಕ್ಷಗಳು ಉಳಿದರೆ ನಾವು ಉಳಿಯುತ್ತೇವೆ’


ಧಾರವಾಡ, ಜೂ 6: ಮನುಕುಲಕ್ಕೆ ಅನೇಕ ವಿಧದಲ್ಲಿ ಸ್ನೇಹಿಯಾಗಿರುವ ವೃಕ್ಷಗಳು ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂದು ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಉಪನಿರ್ದೇಶಕ ಆರ್.ಎಸ್. ಮುಳ್ಳೂರ ಹೇಳಿದರು.
ಅವರು ನಗರದ ಮೂಕಾಂಬಿಕಾ ಕಾಲೋನಿ ಅಭಿವೃದ್ಧಿ ಸಮಿತಿ ಕೋವಿಡ್-19 ನಿಯಮಗಳ ಪರಿಪಾಲನೆಯೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು. ಸಸ್ಯಕಾಶಿಯ ವಿಕಾಸದ ಚಿಂತನೆಯಲ್ಲಿ ನಾವು ತಳೆದಿರುವ ಅಲಕ್ಷ್ಯ ಧೋರಣೆಯೇ ಇಂದು ಹಲವು ತಲ್ಲಣಗಳಿಗೆ ಕಾರಣವಾಗಿದೆ ಎಂದರು.
ಆರ್.ಎಲ್.ಎಸ್. ಶಿಕ್ಷಣ ಸಂಸ್ಥೆಯ ನಿವೃತ್ತ ಗ್ರಂಥಪಾಲಕ ಮಲ್ಲಪ್ಪ ಕಳ್ಳಿಗುಡ್ಡ, ಅಭಿಷೇಕ ಮುಳ್ಳೂರ ಇತರರು ಇದ್ದರು.