ವೃಂದ ಗುಂಪಿನವರಿಗೆ ಪರಿಸರದ ಕಾಳಜಿ


ಸಂಜೆವಾಣಿ ವಾರ್ತೆ
ಸಂಡೂರು :ಸೆ:4  ದಶ ಸಹಸ್ರ (ಸಿಟ್ ಬಾಲ್) ಗಳ ನಡುವೆ ಮತ್ತು ಭೂಮಿಗೆ ಸಮರ್ಪಿಸುವುದರ ಮೂಲಕ ಆರ್ಯವೈಷ್ಯ ಸಮಾಜದ ವೃಂದ ಗುಂಪಿನವರು ವಾಸವಿ ಫೌಂಡೇಶನ್ ಇವರ ಸಹಯೋಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅರಣ್ಯ ವಲಯ ಅಧಿಕಾರಿ ಗಿರೀಶ್ ಕುಮಾರ್ ಪರಿಸರದ ಬಗ್ಗೆ ಕಾಳಜಿ ಇರುವವರು ಮಾತ್ರ ಗಿಡಗಳನ್ನು ನಡೆಸಲು ಸಾಧ್ಯ. ಅಳಿಲು ಸೇವೆಯಾದರೇನು ? ಸೇವೆ ಅಂದರೇನು ? ಎರೆಡು ಒಂದೇ ಅರ್ಥದಿಂದ ಕೂಡಿದ್ದು, ಸಏವಾ ಮನೋಭಾವನೆ ಹೊಂದಿದವರು ಮಾತ್ರ ವ್ಯಕ್ತಿತ್ವದಿಂದ ವಿಕಾಸನ ಹೊಂದಲು ಸಾಧ್ಯ.. ಯಾವ ಮನುಷ್ಯ ಸೇವೆಯ ಮನೊಭಾವನೆ ಹೊಂದಿರುತ್ತಾನೋ ಅವನಲ್ಲಿ ಸಮಾಜ ಮುಖಿ ಚಿಂತನೆಗಳು ಬರಲು ಸಾಧ್ಯ. ವಾಸಿ ಫೌಂಡೇಶನ್ ವೃಂದ ಗುಂಪಿನವರು ಪ್ರತಿವರ್ಷವೂ ಉತ್ತಮ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಪ್ರತಿಮೆಗೆ ಹೂವಿನ ಹಾರ ಹಾಕವುದರ ಜೊತೆಗೆ ಗಂಡಿ ನರಸಿಂಹಸ್ವಾಮಿ ದೇವಸ್ಥಾನ ರಾಮೇಶ್ವರ ದೇವಾಲಯ ಮಾತೆ ಗಂಡಿ ಮಾರೆಮ್ಮ ಮೀನಗೊಳ್ಳದಲ್ಲಿರುವ ಶ್ರೀ ಸಿದ್ದರಾಮೇಶ್ವರ ಗದ್ದುಗೆಯವರೆಗೆ ಪಾದಯಾತ್ರೆ ಮಾಡುವದರ ಮೂಲಕ ಸೀಡ್ ಬಾಲ್ ನಡುವ ಸಮರ್ಪಿಸುವ ಕೈಗೊಂಡರು. ಈ ಸಂದರ್ಬದಲ್ಲಿ ವೈದ್ಯಾದಿಕಾರಿಗಳಾದ ಕಿರಣ್ ಕುಮಾರ್ ವಕೀಲರಾದ ವಿ.ಜಿ. ಕೃಷ್ಣಮೂರ್ತಿ ಔಷಧ ಮಾಲೀಕರಾದ ಸಿದ್ದಲಿಂಗಸ್ವಾಮಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿತು. ವಾಸವಿ ಅಮ್ಮನವರ ದೇವಸ್ಥಾನದಿಂದ ವೃಂದ ಗುಂಪಿನವರು ಪಾದಯಾತ್ರೆಯನ್ನ ಪ್ರಾರಂಬಿಸಿದರು.
ನಂತರ ಸಂಜೆ 4.00 ಗಂಟೆಗೆ ಶ್ರೀ ರಾಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಡೂರು ತಾಲ್ಲೂಕಿನ ವೈದ್ಯಾಧಿಕಾರಿಗಳ ರಾಮಶೆಟ್ಟರ ದಂಪತಿಗಳ ನೇತೃತ್ವದಲ್ಲಿ ಸಂಡೂರಿನ ವಕೀಲರ ಸಂಘದ ಮಾಜಿ ಅದ್ಯಕ್ಷ ಪಿ.ಎಂ. ಶಿವಕುಮಾರ ಇವರ ನೇತೃತ್ವದಲ್ಲಿ ನೆರವೇರಿತು. ಸಂಜೆ 6.00 ಗಂಟೆಗೆ ಯಶವಂತನಗರದ ಗಂಡಿ ಮಾರೆಮ್ಮ, ಮೀನುಗೊಳ್ಳದ ಆವರಣದಲ್ಲಿರುವ ಗದ್ದುಗೆಯ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ ವಕೀಲರಾದ ಶರ್ಮಾಸ್‍ವಲಿ ಮತ್ತು ಸ್ಥಳೀಯ ವ್ಯವಹಾರಗಾರರಾದ ಬಿ.ಎಂ. ಲೋಕೇಶ್ ಹಾಗೂ ಸಾರ್ವಜನಿಕರ ನೇತ್ರವದಲ್ಲಿ ಸೀಡ್ ಬಾಲ್ ಗಳ್ನನು ಭೂಮಿಗೆ ಸಮರ್ಪಿಸುವುದರ ಮೂಲಕ ಪಾದಯಾತ್ರೆ ಸಂಪನ್ನಗೊಂಡಿತು. ವಾಸವಿ ಪೌಂಡೆಶನ್ ಅಧ್ಯಕ್ಷ ವಿಷ್ಣುಕುಮಾರ ಪಾದಯಾತ್ರೆಗಳನ್ನು ಸ್ವೀಕಸರಿಸಿದರು. ದತ್ತುರಾಜ ವಕೀಲರು ವಂದಿಸಿದರು. ಎಂ. ನಾಗರಾಜ ಜಿ. ರಾಘವೇಂದ್ರ ಇ. ಅನಂತರಾಜ ಕೆ.ವಿ. ಸತ್ಯನಾರಾಯಣ ಕೆ.ವಿ. ರಾಜೇಶ್ ವಾಸವಿ ಮಹಿಳಾ ಸಂಘದ ಸದಸ್ಯೆ ಸುಇತಾ ಶಿಕ್ಷಕಿ,ಜಗದೀಶ ವಾದಿರಾಜ, ಸೀತಮ್ಮ ಅಲ್ಲದೇ ಹಲವಾರು ಮಹಾನೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.