ವೃಂದಗ್ರೂಪ್ ವತಿಯಿಂದ ಸಸಿನೆಡುವ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು:ಅ:23: ಶ್ರೀ ಕ್ಷೇತ್ರ ಕುಮಾರಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದ 11ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ ವಾಸವಿ ಫೌಂಡೇಷನ್ ಅಧ್ಯಕ್ಷರಾದ ಎಂ.ನಾಗರಾಜ, ಕಾರ್ಯಧ್ಯಕ್ಷರಾದ ಅರ್.ವಿ. ವಿಷ್ಣುಕುಮಾರ ಮತ್ತು ಅವರ ಕುಟುಂಬದ ಸದಸ್ಯರು ಸಹ ಕಾರ್ಯಾಧ್ಯಕ್ಷರಾದ ಈ.ಆನಂತರಾಜ್ ಹಾಗೂ ಇತರರನ್ನು ಬೀಳ್ಕೊಡುವುದರ ಜೊತೆಗೆ ಸಂಡೂರು ತಾಲೂಕಿನ ಸೀನಿಬಸಪ್ಪ ಕ್ಯಾಂಪಿನಲ್ಲಿರುವ ಬಸವಣ್ಣ ದೇವಸ್ಥಾನ ವೀರಾಂಜಿನೇಯ ದೇವಸ್ಥಾನಗಳ ಸುತ್ತಮುತ್ತಲಿನ ಪರಿಸರದಲ್ಲಿ ದೇವಸ್ಥಾನದ ಹಾದಿಯುದ್ದಕ್ಕೂ ದಶ ಸಹಸ್ರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಶೇಷವಾಗಿ ಈ ಬಾರಿ ಸೀಡ್ಸ್ ಬ್ಯಾಗಳನ್ನು ಭೂಮಿಗೆ ಹಾಕುವುದರ ಮೂಲಕ  ಪರಿಸರ ಅಭಿವೃದ್ದಿಗೆ ಸಹಕರಿಸಿದ್ದಾರೆ. ಪರಿಸರ ಅಭಿವೃದ್ಧಿಯ ಹೋರಾಟಗಾರರಾದ ಟಿ.ಎಂ.ಶಿವಕುಮಾರ ಮಾಜಿಯೋಧ ಮೆಜರ್ ರಾಬಿಕ್ಕಿ ನಾಗರಾಜ ಮತ್ತು ರೈತ ಸಂಘದ ಮಾಜಿ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ, ವೃಂದ ಗ್ರೂಪ್‍ನ ಅರ್.ವಿ.ದತ್ತುರಾಜ ಉಪಸ್ಥಿತರಿದ್ದರು.
ಈ ಗಾಗಲೇ ವೃಂದ ಪ್ರಕಾಶನದವರು 20ಕ್ಕು ಹೆಚ್ಚು ವರ್ಷಗಳಿಂದ 8000 ಕ್ಕೂ ಹೆಚ್ಚಿನ ಸಸಿಗಳನ್ನು ಸಂಡೂರು ಮತ್ತು ದಾವಣಗೇರಿ ತಾಲೂಕುಗಳಲ್ಲಿ ನೂರಾರು ಶಾಲಾ ಕಾಲೇಜು ಅನೇಕ ಮಠಮಂದಿರ, ಬ್ಯಾಂಕ್ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟಿರುವುದರ ಜೊತೆಗೆ ವಿತರಿಸಿ ವನಮಹೋತ್ಸವ ಕಾರ್ಯಕ್ರಮವನ್ನು ಅನೇಕ ಸಂಘ ಸಂಸ್ಥೆಗಳೊಡಗೂಡಿ ನಿರ್ವಹಿಸುತ್ತಾ ಬಂದಿರುವುದು ಸಾರ್ವಜನಿಕರಿಂದ ಪ್ರಶಂಸನೀಯವಾಗಿದೆ.
ಶ್ರಾವಣ ಮಾ¸ದ ಕಡೇ ಶನಿವಾರ ದಿನಾಂಕ: 9.9.2023 ರಂದು ಗುಡ್ಡದ ತಿಮ್ಮಪ್ಪನ ದೇವಸ್ಥಾನಕ್ಕೆ ವೃಂದಾಪ್ರಕಾರವರ ವೃಂದಾಗ್ರೂಪ್ನವರು ಪಾದಯಾತ್ರೆ ಕೈಗೊಳ್ಳಲಿದ್ದು ಸಂಡೂರು ಪಟಟಣದಲ್ಲಿನ ಮುಖ್ಯ ಬೀದಿಯಲ್ಲಿನ ವಾಸವೀ ದೇವಸ್ಥಾನಕ್ಕೆ ಆಗಮಿಸುವುದರಮೂಲಕ ಸಾರ್ವಜನಿಕರು ಸಹಕರಿಸಲು ಅರ್.ವಿಷ್ಣುಕುಮಾರ್, ಅರ್.ವಿ.ದತ್ತುರಾಜ, ಬಿ.ಎಂ. ಉಜ್ಜಿನಯ್ಯ ರಾಬಕ್ಕಿ ನಾಗರಾಜ ಪರಿಸರ ಪ್ರೇಮಿಟಿ>ಎಂ. ಶಿವಕುಮಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.