“ವೂಲ್ಫ್” ಚಿತ್ರದ ಟೀಸರ್ ಬಿಡುಗಡೆ

,ಕನ್ನಡ, ತಮಿಳು,ಹಿಂದಿ, ತೆಲುಗು ಭಾಷೆಯಲ್ಲು ಚಿತ್ರಿತವಾಗಿರುವ ಡಾನ್ಸಿಂಗ್ ಸ್ಟಾರ್ ಪ್ರಭುದೇವ, ಅನುಸೂಯ ಭಾರದ್ವಾಜ್,ಲಕ್ಷ್ಮಿ ರೈ,ವಸಿಷ್ಠ ಸಿಂಹ,ಅಂಜು ಕುರಿಯನ್,ಮುಂತಾದ ಖ್ಯಾತ ತಾರಾ ಬಳಗವನ್ನೆ ಹೊಂದಿರುವ “ವೂಲ್ಫ್”  ಚಿತ್ರ  ಟೀಸರ್ ಬಿಡುಗಡೆಯಾಗಿದೆ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನವಾದ ಕಥಾ ಹಂದರವನ್ನು ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಇಡಲು ಚಿತ್ರ ತಂಡ ಖಾತರವಾಗಿದೆ.

,ಇದೆ ತಿಂಗಳ 16 ರಂದು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಜನುಮದಿನ ಅಂದು ಅಭಿಜಾತ ಕಲಾವಿದ ವಿಜಯ ಸೇತುಪತಿ ಹಾಡಿರುವ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಹ ಬಿಡುಗಡೆಯಾಗಲಿದೆ.

 ಈ ಚಿತ್ರವನ್ನು ವಿನು ವೆಂಕಟೇಶ್ ನಿರ್ದೇಶನ ಮಾಡಿದ್ದು, ಖ್ಯಾತ ಛಾಯಾಗ್ರಾಹಕ ಅರುಳ್ ವಿನ್ಸೆಂಟ್ ಛಾಯಾಗ್ರಹಣ, ಖತಾರೆ ಜಯಸುಧಾ  ಪುತ್ರ ಹಾಗೂ  ಖ್ಯಾತ ಸಂಗೀತ ನಿರ್ದೇಶಕ  ಅಮರೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಪ್ರಸಾದ್ ಬಿ ಏನ್ ಮತ್ತು ಕಾಮರಾಜು ಕಾರ್ಯ ನಿರ್ವಹಿಸಿರುವ  ಚಿತ್ರವನ್ನು  ಸಂದೇಶ ನಾಗರಾಜ್ ಅವರು ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ.