ವುಹಾನ್ ಲ್ಯಾಬ್ ಮಹಿಳೆಗೆ ಸೋಂಕು ಬಹಿರಂಗ

ಬಿಜಿಂಗ್, ಜೂ. ೨- ಕೊರೊನಾ ವೈರಸ್ ಹುಟ್ಟುಹಾಕಿರುವ ಆರೋಪಗಳಿಂದ ಪಾರಾಗಲು ಯತ್ನಿಸುತ್ತಿರುವ ಚೀನಾ ಮೇಲೆ ಜಾಗತಿಕ ಸಮುದಾಯದ ಒತ್ತಡ ಹೆಚ್ಚಾಗುತ್ತಲೇ ಇದೆ. ಕೊರೊನಾ ವೈರಸ್ ನಿಂದ ಸೊಂಕಿತಳಾದ ಮೊಟ್ಟಮೊದಲ ರೋಗಿ ಸೂ ಗೆ ಸಂಬಂಧಿಸಿದಂತೆ ತನಿಖೆ ಚುರುಕು ಪಡೆದುಕೊಂಡಿದೆ. ಚೀನಾದ ಈ ಮಹಿಳೆ ಮೊಟ್ಟಮೊದಲ ಬಾರಿಗೆ ವುಹಾನ್ ಲ್ಯಾಬ್ ನಿಂದ ಹೊರಬಂದ ಕೊರೊನಾ ವೈರಸ್ ನಿಂದ ಸೋಂಕಿತಳಾಗಿದ್ದಳು ಎನ್ನಲಾಗಿದೆ.
ನವೆಂಬರ್ ನಲ್ಲಿ ಈ ಮಹಿಳೆಯಲ್ಲಿ ಲಕ್ಷಣಗಳು ಕಂಡುಬಂದಿದ್ದವು ಈ ಮಹಿಳೆ ಕೊವಿಡ್ ಸೋಂಕಿತಳಾಗಿರುವ ಕುರಿತು ಮಾಹಿತಿ ನೀಡಿರುವ ಮೂಲಗಳು, ಈ ೬೧ ವರ್ಷದ ಮಹಿಳೆ ನವೆಂಬರ್ ನಲ್ಲಿ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದಿವೆ.
ಆಕೆ ಚೇತರಿಸಿಕೊಂಡ ಸುಮಾರು ಒಂದು ತಿಂಗಳ ಬಳಿಕ ಚೀನಾ ವಿಶ್ವ ಆರೋಗ್ಯ ಸಂಸ್ಥೆಗೆ ಕೊರೊನಾ ಪ್ರಕೋಪದ ಕುರಿತು ಮಾಹಿತಿ ನೀಡಿತ್ತು. ಈ ಎಲ್ಲಾ ಸಾಕ್ಷಾಧಾರಗಳು ಕೊವಿಡ್-೧೯ ಅನ್ನು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು ಎಂಬ ಸಂಕೇತಗಳನ್ನು ನೀಡುತ್ತವೆ.
ಇನ್ನೊಂದೆಡೆ ಇಡೀ ವಿಶ್ವವೇ ಚೀನಾ ಮೇಲೆ ಈ ಕುರಿತು ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದು, ಈ ಸಂಗತಿಯ ಕುರಿತು ತನ್ನ ಸ್ಥಿತಿಯನ್ನು ಸ್ಪಷ್ಟಪಡಿಸಬೇಕು ಎನ್ನುತ್ತಿದೆ.
ಏತನ್ಮಧ್ಯೆ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಚೀನಾ, ಬಿಡೆನ್ ಸರ್ಕಾರದ ಮೇಲೆ ರಾಜಕೀಯ ನಡೆಸುತ್ತಿರುವ ಆರೋಪ ಮಾಡಿದೆ.

ಕೋವಿಡ್ ವೈರಸ್ ಮೂಲವೇನು?
ಕೋವಿಡ್ ವೈರಸ್ ಮೂಲದ ಬಗ್ಗೆ ಸರಳವಾಗಿ ಹೇಳಬೇಕೆಂದರೆ, ಸಾವಿರಾರು ವರ್ಷಗಳಲ್ಲಿ, ಇತರ ಪ್ರಾಣಿಗಳಿಗೆ ಸೋಂಕು ತಗುಲಿಸುವ ವೈರಸ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳಿವೆ. ಈ ಎಲ್ಲವೂ ಕೆಲವೊಮ್ಮೆ ಮನುಷ್ಯರನ್ನು ನಿಕಟ ಸಂಪರ್ಕದಲ್ಲಿ ಸೋಂಕು ತಗುಲಿಸಲು ಬಳಸಲಾಗುತ್ತದೆ. ಇದಕ್ಕೆ ‘ಸ್ಪಿಲ್ಲೋವರ್’ ಎನ್ನಲಾಗುತ್ತದೆ. ಬಾವಲಿಗಳಿಂದ ವೈರಸ್ ಕಾಣಬಂದಿದೆ ಎಂದು ಸಂಶೋಧನೆ ದೃಢಪಡಿಸಿದೆ. ಈ ಹೊಸ ವೈರಸ್ ನ್ನು ಮನುಷ್ಯ ಈ ಹಿಂದೆ ಎಂದೂ ನೋಡಿರಲಿಲ್ಲ, ಆದರೂ, ಒಬ್ಬರಿಗೆ ಸೋಂಕು ತಗಲುವ ಸಾಮರ್ಥ್ಯವನ್ನು ಹೊಂದಿದೆ. ಮಾನವನಿಂದ ಮನುಷ್ಯನಿಗೆ ಹರಡುವಿಕೆಗೆ ಕಾರಣವಾಗುತ್ತದೆ. ನೈಸರ್ಗಿಕ ವಿಕಾಸವು ಕಾರ್ಯನಿರ್ವಹಿಸುವ ವಿಧಾನ ಇದು.
ಲ್ಯಾಬ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ವೈರಸ್
’ದಿ ಸನ್’ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಬ್ರಿಟಿಶ್ ಗೂಢಚಾರಿಗಳು ಚೀನಾ ವತಿಯಿಂದ ವೈರಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂಬ ವಾದ ಒಪ್ಪಿಕೊಳ್ಳುವಂತಿದೆ ಎಂದಿದ್ದಾರೆ. ಇನ್ನೊಂದೆಡೆ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಕೂಡ ಈ ಸಂಗತಿಯ ಕುರಿತು ಆಳವಾದ ಅಧ್ಯಯನ ನಡೆಸಲು ಆದೇಶ ನೀಡಿದ್ದಾರೆ.
ಇದಲ್ಲದೆ ಮತ್ತೊಂದು ಅಧ್ಯಯನ ಕೊರೊನಾ ವೈರಸ್ ಅನ್ನು ಅಂದರೆ ತಯಾರಿಸಲಾಗಿದೆ ಮತ್ತು ಇದಕ್ಕೆ ಯಾವುದೇ ನೈಸರ್ಗಿಕ ಪೂರ್ವಜರಿಲ್ಲ ಎಂದಿದೆ. ಈ ಕುರಿತು ವರದಿ ಪ್ರಕಟಿಸಿರುವ ’ದಿ ಮೇಲ್’, ’ಕೊರೊನಾ ವೈರಸ್ ಉತ್ಪತ್ತಿಯ ಈ ಎಲ್ಲ ಥಿಯರಿಗಳ ನಡುವೆ ನಿಗೂಢ ಮಹಿಳೆಯೋರ್ವಳಿದ್ದಾಳೆ ಮತ್ತು ಆಕೆಯನ್ನು ’Pಚಿಣieಟಿಣ Su’ ರೂಪದಲ್ಲಿ ಗುರುತಿಸಲಾಗುತ್ತದೆ’ ಎಂದಿದೆ.

ಚೀನಾ ಅಧಿಕಾರಿಯಿಂದ ವಿಷಯ ಬಹಿರಂಗ
ವರದಿಗಳ ಪ್ರಕಾರ ಚೀನಾದ ಓರ್ವ ಮುಖ್ಯ ಅಧಿಕಾರಿ ಮೈಮರೆತು ಈ ಮಹಿಳೆಯ ವಿಷಯವನ್ನು ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದ್ದು, ಆಕೆಯೇ ಈ ಮಾರಕ ವೈರಸ್ ಸೋಂಕಿಗೆ ಗುರಿಯಾದ ಮೊದಲ ಮಹಿಳೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಚೀನಾದ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಈ ಮಹಿಳೆ ವುಹಾನ್ ಲ್ಯಾಬ್ ನಿಂದ ಸುಮಾರು ೩ ಮೈಲುಗಳ ದೂರದಲ್ಲಿ ವಾಸವಾಗಿದ್ದಾಳೆ ಹಾಗೂ ಆಕೆಗೆ ನವೆಂಬರ್ ೨೦೧೯ ರಲ್ಲಿ ಕೋವಿಡ್-೧೯ ಸೋಂಕು ತಗುಲಿತ್ತು. ಚಿಕಿತ್ಸೆಗಾಗಿ ಆಕೆಯನ್ನು ವುಹಾನ್ ನ ಹತ್ತಿರದಲ್ಲಿರುವ ರಿಂಗ್ಜುನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಇಂತಹ ಪರಿಸ್ಥಿತಿಯಲ್ಲಿ ಡಬ್ಲ್ಯುಐವಿ ಹಾಗೂ ಚೈನೀಸ್ ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ನಿಂದ ನಿರ್ವಹಿಸಲಾಗುವ ಮತ್ತೋರ್ವ ಸಿಕ್ಯೋರಿಟಿ ಲ್ಯಾಬ್ ಜೊತೆಗಿನ ಮಹಿಳೆಯ ನಿಕಟತೆ, ಕೊರೊನಾ ವೈರಸ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂಬ ಸಾಧ್ಯತೆಯನ್ನು ಎತ್ತಿತೋರಿಸುತ್ತಿವೆ.