ವುಶು ಚಾಂಪಿಯನ್ ಶಿಪ್ : ಬಾಗಲಕೋಟೆಯ ಕ್ರೀಡಾಪಟುಗಳ ಸಾಧನೆ

ಬಾಗಲಕೋಟೆ: ಮಾ27: ದಿನಾಂಕ 21 ರಿಂದ 25 ಮಾರ್ಚ್ 2021 ರ ವರೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದ 20 ನೇ ರಾಷ್ಟ್ರೀಯ ಸಬ್ ಜೂನಿಯರ್ ವುಶು ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯದ ಬಾಗಲಕೋಟೆಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ 1 ಬಂಗಾರ, 5 ಬೆಳ್ಳಿ, ಹಾಗೂ 4 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ಕುಮಾರಿ ಖುಷಿ ವರ್ಮಾ ಬಂಗಾರ, ಬೆಳ್ಳಿ ಹಾಗೂ ಪದಕ, ಕುಮಾರಿ ವಿದ್ಯಧರಿ ವಿ. ಗರಸಂಗಿ ಬೆಳ್ಳಿಯ ಪದಕ, ಕುಮಾರಿ ಸಾನ್ವಿ ಜಂಗಿ ಬೆಳ್ಳಿಯ ಪದಕ, ಕುಮಾರ್ ತನ್ಮಯ ಕುಪ್ಪಸ್ತ ಬೆಳ್ಳಿಯ ಪದಕ, ಕುಮಾರ್ ಸುಮಿತ್ ಘೋರ್ಪಡೆ ಕಂಚಿನ ಪದಕ, ಕುಮಾರ್ ವಿನಾಯಕ ವಿ ಗರಸಂಗಿ ಕಂಚಿನ ಪದಕ, ಕುಮಾರ್ ವಿನಯ ವಿ ಗರಸಂಗಿ ಕಂಚಿನ ಪದಕ, ಕುಮಾರ್ ಮೆಘರಾಜ ಬಡಿಗೇರ ಕಂಚಿನ ಪದಕ ಪಡೆದುಕೊಂಡಿದ್ದಾರೆ, ಕುಮಾರ್ ಪ್ರಥ್ವಿರಾಜ ಗೊಡಿ ಹಾಗೂ ಸಿದ್ದೇಶ ಜಂಗಿ ಭಾಗಿಯಾಗಿದ್ದರು. ಭಾರತೀಯ ವುಶು ಸಂಸ್ಥೆಯ ಸಿ. ಇ. ಓ. ಗಳಾದ ಸುಹೇಲ ಅಹ್ಮದ್ ರವರು ಹಾಗೂ ಟೆಕ್ನಿಕಲ್ ಚೆರ್ಮನರಾರ ಶಂಭು ಶೆಟ್ ರವರು ಕ್ರೀಡಾಪಟುಗಳಿಗೆ ಪ್ರಶಸ್ತಿ ಪದಕಗಳನ್ನು ನೀಡಿ ಗೌರವಿಸಿದರು. ಸದರಿ ಚಾಂಪಿಯನ್ ಶಿಪ್ ನಲ್ಲಿ ರಾಜ್ಯ ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಡಿ. ಮೊಕಾಶಿ ಯವರು ತೀರ್ಪೂಗಾರರಾಗಿ ಹಾಗೂ ಖಜಾಂಚಿ ಗಳಾದ ಸಂಗಮೇಶ ಲಾಯದಗುಂದಿಯವರು ಸಹಾಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಸದರಿ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಿ ಪದಕ ಪಡೆದ ಕ್ರೀಡಾಪಟುಗಳಿಗೆ ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷರು ಹಾಗೂ ಜನಪ್ರಿಯ ಶಾಸಕರಾದ ಡಾ. ವಿ. ಸಿ. ಚರಂತಿಮಠ ರವರು ಹಾಗೂ ರಾಜ್ಯ ವುಶು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಬಾಗಲಕೋಟೆ ಜಿಲ್ಲಾ ವುಶು ಸಂಸ್ಥೆಯ ಅಧ್ಯಕ್ಷರಾದ ಡಾ. ರಾಜು ನಾಯ್ಕರ, ಉಪಾಧ್ಯಕ್ಷರಾದ ವಿವೆಕಾನಂದ ಗರಸಂಗಿ ಯವರು ಹಾಗೂ ಸದಸ್ಯರುಗಳು ಹಾರ್ಧಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ರಾಜ್ಯ ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಡಿ ಮೋಖಾಶಿಯವರು ತಿಳಿಸಿದ್ದಾರೆ.