ವುಶು ಚಾಂಪಿಯನ್ ಶಿಪ್‌ಗೆ ಆಯ್ಕೆ

ಶಿವಮೊಗ್ಗ.ಡಿ.೨೩;  ಶಿವಮೊಗ್ಗದಲ್ಲಿ ನಡೆದ  ವುಶು ಚಾಂಪಿಯನ್ಶಿಪ್‌ನಲ್ಲಿ ಶಿವಮೊಗ್ಗದ ನಾನಾ ತಾಲ್ಲೂಕಿನ ಹಲವಾರು ವುಶು ಕ್ರೀಡಾಪಟುಗಳು ಭಾಗವಹಿಸಿ, ಸುಮಾರು 19 ಕ್ರೀಡಾಪಟ್ಟುಗಳು ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ವುಶು ಚಾಂಪಿಯನ್ಶಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿಯನ್ನು ಶಿವಮೊಗ್ಗ ಜಿಲ್ಲಾ ವುಶೂ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿತ್ತು. ಎಲ್ಲಾ ಪದಕ ವಿಜೇತರಿಗೆ ಶಿವಮೊಗ್ಗ ಜಿಲ್ಲಾ ವುಶೂ ಸಂಸ್ಥೆಯ ಅಧ್ಯಕ್ಷರಾದ  ಅಬ್ದುಲ್ ಕಲಾಂ, ತೀರ್ಥಹಳ್ಳಿಯ ಕ್ಲಾಸ್ ಒನ್ ಕೊಂಟ್ರಾಕ್ಟರ್ ಇವರು ಹಾಗೂ ಕಾರ್ಯದರ್ಶಿಗಳಾದ  ಶಬ್ಬೀರ್ ಅಹ್ಮದ್‌ರವರು ಹಾಗೂ ಪಂದ್ಯಾವಳಿಯ ತೀರ್ಪುಗಾರರು ಶುಭಾ ಹಾರೈಸಿದ್ದಾರೆ.