
ಬಾಗಲಕೋಟೆ, ಮಾ.15: ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಖೆಲೋ ಇಂಡಿಯಾ ಖೆಲೋ ವಿಮೆನ್ಸ್ ಲೀಗ್ ಬಾಗಲಕೋಟ ವತಿಯಿಂದ ವುಶು ಚಾಂಪಿಯನ್ ಶಿಪ್ ನಲ್ಲಿ ಗೋಲ್ಡ್ ಮೆಡಲ್ ನ್ನು ಗದ್ದನಕೇರಿ ಗ್ರಾಮದ ಶ್ರೀ ಹುಚ್ಚೇಶ್ವರ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕವಿತಾ ರುದ್ರಯ್ಯ ಗಣಕುಮಾರಮಠ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾಳೆ.
ಜಿಲ್ಲಾ ವುಷು ಚಾಂಪಿಯನ್ ಶಿಪ್ ನ ತರಬೇತಿದಾರ ಶಿವಯೋಗಿ ಎಸ್. ಗೋವಿನಕೊಪ್ಪ ಅವರು ಮಕ್ಕಳಿಗೆ ಉಚಿತ ತರಬೇತಿ ನೀಡಿದರು.
ಶಾಲೆಯ ಸಲಹಾ ಸಮಿತಿ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದರು.