ವೀ ವಿ ಸಂಘ ಈ ಬಾರಿ ಹೊಸ ಸದಸ್ಯತ್ವ ಗ್ಯಾರೆಂಟಿ


ಎನ್.ವೀರಭದ್ರಗೌಡ
ಬಳ್ಳಾರಿ, ಆ.17: ಅಖಂಡ ಬಳ್ಳಾರಿ ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಈ ಬಾರಿ ನೂತನ ಸದಸ್ಯತ್ವ ಪಡೆಯುವುದು ಬಹುತೇಖ ಗ್ಯಾರೆಂಟಿ ಎನ್ನುವ ಸನ್ನಿವೇಶ ಉಂಟಾಗಿದೆ.
ಜಿಲ್ಲೆಯಲ್ಲಿ ಇಂಜಿನೀಯರಿಂಗ್ ಸೇರಿದಂತೆ 50 ಕ್ಕೂ ಹೆಚ್ಚು ಶಾಲಾ, ಕಾಲೇಜು, ಹಾಸ್ಟೆಲ್, ಕಲ್ಯಾಣ ಮಂಟಪ  ಮೊದಲಾದವುಗಳನ್ನು ಹೊಂದಿರುವ ಈ ಸಂಸ್ಥೆಗೆ ಅನೇಕ ವರ್ಷಗಳಿಂದ ಹೊಸ ಸದಸ್ಯರನ್ನು ಪಡೆದಿಲ್ಲ.
ಅನೇಕರು ಸಾವನ್ನಪ್ಪಿದ್ದಾರೆ. ಇದರಿಂದ ಸಂಘದ ಸದಸ್ಯರ ಸಂಖ್ಯೆ ಅಂದಾಜು 2200 ಗಡಿಗೆ ಬಂದು ನಿಂತಿದೆ.
ಹೊಸ ಸದಸ್ಯತ್ವ ತೆಗೆದುಕೊಳ್ಳಬೇಕೆಂದು ಸಹ  ಹೋರಾಟ ಮಾಡುತ್ತಲೇ ಬಂದಿದೆ. ಸದಸ್ಯತ್ವ ಪಡೆಯಲು ಈ ಹಿಂದಿನ ನಿಯಮಗಳನ್ನು ತಿದ್ದುಪಡಿ ಮಾಡಬೇಕೆಂಬ ಬೇಡಿಕೆ ಸಹ ಇದೆ. ಅದಕ್ಕಾಗಿ ಈ ವಿಷಯ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೈಲ ತಿದ್ದುಪಡಿ ಕಾರ್ಯಕ್ಕೆ ಒಪ್ಪಿಗೆ ಆಗಿದೆ. ತಿದ್ದುಪಡಿ ಮಾಡಿರುವ ಬಗ್ಗೆ ಕಾರಗಯಕಾರಿ ಸಮಿತಿಯ ಒಪ್ಪಿಗೆಗೆ ಈ ತಿಂಗಳ 27 ರಂದು ಸಭೆ ಕರೆಯಲಾಗಿದೆ.
ಬಹುತೇಕ ಈ ಸಭೆಯಲ್ಲಿ ಹೊಸ ಸದಸ್ಯತ್ವ ಪಡೆಯಲು ಅನುಮೋದನೆ ನೀಡುವ ಸಾಧ್ಯತೆ ಇದೆ‌. ನಂತರ ಸಾಮನ್ಯ ಸಭೆ(ಜಿ.ಬಿ)ಯಲ್ಲಿ ಅನುಮೋದನೆ ಪಡೆಯಬೇಕಿದೆ.
ಲಭ್ಯ ಮಾಹಿತಿಯ ಪ್ರಕಾರ ಹೊಸ ಸದಸ್ಯತ್ವಕ್ಕೆ 25 ಸಾವಿರ ರೂ ಶುಲ್ಕ ನಿಗಧಿ ಮಾಡುತ್ತಾರಂತೆ. ಸದಸ್ಯತ್ವ ಸಂಖ್ಯೆ ಸೀಮಿತ ಮಾಡಬೇಕು ಎಂಬ ವಾದವೂ ಇದೆ. ಆದರೆ ಒಂದು ಬಾರಿ  ಅಖಂಡ ಬಳ್ಳಾರಿ ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದ  ಎಷ್ಟೇ ಜನರು ಅರ್ಜಿ ಸಲ್ಲಿಸಲಿ ಎಲ್ಲರಿಗೂ ಸದಸ್ಯತ್ವ ನೀಡೋಣ ಎಂಬ ಚರ್ಚೆಯೂ ಇದೆಯಂತೆ. 
ಒಟ್ಟಾರೆ ಸಂಘದ  ಕಳೆದ ಚುನಾವಣೆ ಮುನ್ನ ನೀಡಿದ ಭರವಶೆಯಂತೆ ಹೊಸ ಸದಸ್ಯತ್ವ ನೀಡುವುದು. ಹೊಸ ಸದಸ್ಯರಿಗೆ  ಈ ಬಾರಿಯೇ ಸ್ಪರ್ಧೆಗೆ ಅವಕಾಶ ನೀಡಬೇಕೆ, ಬೇಡವ. ಇಲ್ಲಾ ಮತದಾನಕ್ಕಷ್ಟೇ ಅವಕಾಶ ಮಾಡಬೇಕಾ, ಇಲ್ಲ ಈ ಬಾರಿ ಚುನಾವಣೆಯಿಂದ ದೂರ ಇಡಬೇಕ ಎಂಬ ಬಗ್ಗೆಯೂ ಚರ್ಚೆ ಇದೆಯಂತೆ. ಎಲ್ಲವುದು ಈ ತಿಂಗಳ 27 ರಂದು ನಡೆಯುವ  ಎಂಸಿನಲ್ಲಿ ತಿಳಿಯಲಿದೆ.
 ಸಂಘದ ಸದಸ್ಯತ್ವ ನೀಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇದೆ‌. ಈ ಬಾರಿ ನೀಡಲೇ ಬೇಕು. ಎಷ್ಟೇ ಜನರು ಅರ್ಜಿ ಸಲ್ಲಿಸಿದರೂ ಅರ್ಹ ಎಲ್ಲರಿಗೂ ನೀಡಬೇಕು.
ಶುಲ್ಕ ನಿಗಧಿ ಬಗ್ಗೆ ಜಿಬಿನಲ್ಲಿ ಚರ್ಚಿಸಿ ಅಮನತಿಮಗೊಳಿಸಲಿ.
ಮೀನಳ್ಳಿ ಚಂದ್ರಶೇಖರ್
ಸಂಚಾಲಕರು, ವೀ.ವಿ.ಸಂಘ ಸದಸ್ಯತ್ವ ಹೋರಾಟ ಸಮಿತಿ.