ವೀ.ವಿ.ಸಂಘ: ಇನ್ನು ಬಗೆಹರಿಯದ ಬಹುಮತದ ಕಗ್ಗಂಟು

ಎನ್.ವೀರಭದ್ರಗೌಡ
ಬಳ್ಳಾರಿ, ಮಾ.27: ಇಲ್ಲಿನ ಪ್ರತಿಷ್ಟಿತ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೇ ನಡೆದು, ಫಲಿತಾಂಶ ಘೊಷಣೆಯಾಗಿ ಆರು ದಿನಗಳಾದರೂ ಸ್ಪಷ್ಟ ಬಹುಮತ ಬಾರದ ಕಾರಣ ಅಧ್ಯಕ್ಷರ ಆಯ್ಕೆ ಸಭೆ ನಡೆಸಲು ಇನ್ನು ದಿನಾಂಕ ನಿಗಧಿಯಾಗಿಲ್ಲ. ಫಲಿತಾಂಶ ಘೋಷಣೆಯಾದ 20 ದಿನದೊಳಗೆ ಅಧ್ಯಕ್ಷರ ಆಯ್ಕೆ ಮಾಡಬೇಕಿದ್ದು. ಬಹುಮತದ ಕಗ್ಗಂಟು ಇನ್ನೂ ಮುಂದುವರೆದಿದೆ.
ಹಿರಿಯರ ಮತ್ತು ಯುವಕ ವೃಂದಕ್ಕೆ ತಲಾ 14 ಸದಸ್ಯರು ಆಯ್ಕೆಯಾಗಿರುವುದೇ ಈ ಕಗ್ಗಂಟಿಗೆ ಮುಖ್ಯ ಕಾರಣವಾಗಿದೆ. ಇನ್ನು ಸ್ವತಂತ್ರವಾಗಿ ಆಯ್ಕೆಯಾಗಿರುವ ಸಂಘದ ಕಾರ್ಯಕಾರಿ ಮಂಡಳಿಗೆ 9 ನೇ ಬಾರಿಗೆ ಆಯ್ಕೆಯಾಗಿರುವ ಅತೀ ಹಿರಿಯ ಸದಸ್ಯ ಮಹೇಶ್ವರಸ್ವಾಮಿ ಅವರು ಮತ್ತು ಸಮನ್ವಯ ತಂಡದಿಂದ ಆಯ್ಕೆಯಾಗಿರುವ ಏಕೈಕ ಸದಸ್ಯ ಡಾ.ರಾಜಶೇಖರ್ ಅವರು ಯಾರಿಗೆ ತಾವು ಬೆಂಬಲ ನೀಡಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲದಿರುವುದು ಸಹ ಕಾರಣವಾಗಿದೆ.
ಜಂಗಮ ಸಮುದಾಯಕ್ಕೆ:
ಈವರೆಗೆ 105 ವರ್ಷಗಳ ಸಂಘದ ಇತಿಹಾಸದಲ್ಲೇ ವೀರಶೈವರಲ್ಲಿನ ಜಂಗಮ ಸಮುದಾಯದಿಂದ ಸಂಘಕ್ಕೆ ಅಧ್ಯಕ್ಷರಾಗಿ ಯಾರೂ ಸೇವೆ ಸಲ್ಲಿಸುವ ಅವಕಾಶ ದೊರೆತಿಲ್ಲ. ಈಗ ಹಿರಿಯ ತಂಡದಲ್ಲಿ ಗುರುಸಿದ್ದಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಆ ತಂಡ ಸಿದ್ದವಾಗಿದೆ. ಅದಕ್ಕಾಗಿ ಮಹೇಶ್ವರಸ್ವಾಮಿ ಅವರು ಬೆಂಬಲ ನೀಡಿದರೆ ಒಳಿತು ಎಂಬುದು. ಜಂಗಮ ಸಮುದಾಯದ ಅಭಿಪ್ರಾಯವಾಗಿದೆ. ಅದೇ ರೀತಿ ಜಂಗಮ ಸಮುದಾಯದ ಹಿರಿಯ ಸದಸ್ಯರಾಗಿರುವ ಮಹೇಶ್ವರಸ್ವಾಮಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಿ ಎಂಬುದು ಮಹೇಶ್ವರಸ್ವಾಮಿ ಅವರ ಬೆಂಬಲಿಗರದ್ದಾಗಿದೆ. ಆಯ್ಕೆಯಾಗಿರುವ ಯಾವುದಾದರೂ ತಂಡದವರು ಆಡಳಿತ ನಡೆಸಲು ಅವಕಾಶ ಬೇಕು ಎನ್ನುವುದಾದರೆ ಅನಿವಾರ್ಯವಾಗಿ ಮಹೇಶ್ವರಸ್ವಾಮಿ ಅವರಿಗೆ ಬೆಂಬಲ ನೀಡಲಿ ಎಂಬ ವಾದವೂ ಇದೆ. ಅಷ್ಟೇ ಅಲ್ಲದೆ ಗುರುಸಿದ್ದಸ್ವಾಮಿ ಮತ್ತು ಮಹೇಶ್ವರಸ್ವಾಮಿ ಅವರಿಗೆ ಅಧ್ಯಕ್ಷ ಅವಧಿಯ ಅರ್ಧ ಅವಧಿ ಹಂಚಿಕೆಯಾಗಲಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂತಿಮ ಇಲ್ಲ:
ಇನ್ನು ಯಿರಿಯರ ತಂಡದಲ್ಲಿ ಅಧ್ಯಕ್ಷಸ್ಥಾನ ಗುರುಸಿದ್ದಸ್ವಾಂಇಗೆ ಎಂದು ಅಂತಿಮವಾಗಿರುವ ರೀತಿಯಲ್ಲಿ, ಯುವಕ ತಂಡದಲ್ಲಿ ಆಗಿಲ್ಲ. ಈ ಹಿಂದೆ ಅಧ್ಯಕ್ಷರಾಗಿದ್ದ ಅಲ್ಲಂ ಬಸವರಾಜ್ ಅವರು ಸಹ ಮತ್ತೊಮ್ಮೆ ಅಧ್ಯಕ್ಷರಾಗಲು ಹಿಂಗಿತ ವ್ಯಕ್ತಪಡಿಸಿದ್ದಾರಂತೆ. ಈ ತಂಡದಲ್ಲಿ ಹಾವಿನಾಳ್ ಶರಣಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು, ಇಲ್ಲಾ ತಂಡ ಕಟ್ಟಿದ ಡಾ. ಮಹಾಂತೇಶ್ ಅವರೇ ಆಗಲಿ ಎಂಬ ಚರ್ಚೆ ನಡೆದಿದೆಯಂತೆ. ಆದರೆ ಇನ್ನೂ ಯಾವುದೇ ಅಂತಿಮ ಆಗಿಲ್ಲ. ಜೊತೆಗೆ ಈ ತಂಡಕ್ಕೆ ಡಾ.ರಾಜಶೇಖರರ್ ಅವರು ಬೆಂಬಲ ನೀಡುತ್ತಾರೆಂಬ ನಿರೀಕ್ಷೆ ಇದೆ.
ಜಂಪಿಂಗ್:
ಒಂದೊಂದು ತಂಡದಲ್ಲಿ ಗೆದ್ದು ಮತ್ತೊಂದು ತಂಡಕ್ಕೆ ಬೆಂಬಲ ನೀಡಿದ ಉದಾಹರಣೆ ಈ ಹಿಂದೆಯೂ ನಡೆದಿದೆ. ಅದೇ ರೀತಿ. ಜಂಪಿಗ್ ಜಿಲಾನ್‍ಗಳನ್ನು ತಮ್ಮ ತಂಡಕ್ಕೆ ಕರೆದುಕೊಳ್ಳಲು ಎರೆಡೂ ತಂಡಗಳ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಆದರೆ ಮಹೇಶ್ವರಸ್ವಾಮಿ ಮತ್ತು ಡಾ.ರಾಜಶೇಖರ್ ಅವರು ಯಾವುದಾದರೂ ಒಂದು ತಂಡಕ್ಕೆ ಬೆಂಬಲ ನೀಡಿದರೆ ಈ ಜಂಪಿಗ್ ಪರಿಸ್ಥಿತಿ ಉಂಟಾಗುವುದಿಲ್ಲ.
ಸಧ್ಯ ಎರೆಡು ತಂಡದ ಮುಖಂಡರು ಮಹೇಶ್ವರಸ್ವಾಮಿ ಮತ್ತು ರಾಜಶೇಖರ್ ಅವರ ಮನೆಗೆ ತೆರಳಿ ಬೆಂಬಲ ನೀಡುವಂತೆ ಕೋರಿದ್ದಾರೆ.
ಟಾಸ್:
ಮಹೇಶ್ವರಸ್ವಾಮಿ ಅವರು ಒಂದು ಕಡೆ, ಡಾ.ರಾಜಶೇಖರ್ ಅವರು ಮತ್ತೊಂದು ಗುಂಪಿಗೆ ಬೆಂಬಲ ನೀಡಿದರೆ ಅಗ ಸದಸ್ಯರ ಸಂಖ್ಯೆ ಸಮನಾದ ಕಾರಣ ಚುನಾವಣಾ ನಿಯಮದಂತೆ ಟಾಸ್ ಮಾಡಿ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ.
ಒಟ್ಟಿನಲ್ಲಿ ಯಾರು ಯಾರಿಗೆ ಬೆಂಬಲ, ಏನೇನು ಬೇಡಿಕೆ, ಸಮುದಾಯದ ಮುಖಂಡರವ ಒತ್ತಡ, ಶೀಫಾರಸ್ಸು, ಜಂಪಿಂಗ ಜಿಲಾಣಿಗಳಿಗಾಗಿ ಮಾತುಕತೆ ಮುಂದುವರೆದಿದ್ದು ಮುಂದಿನ ವಾರದೊಳಗೆ ಅಂತಿಮ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.


ಸಂಘದ ಅಧ್ಯಕ್ಷರ ಆಯ್ಕೆ ಫಲಿತಾಂಶ ಘೋಷಣೆಯ ನಂತರ 20 ದಿನದಲ್ಲಿ ನಡೆಯಬೇಕಿದೆ. ಈಗಾಲೇ ಎರೆಡೂ ತಂಡದ ಸದಸ್ಯರಿಗೆ ಆಯ್ಕೆ ಪ್ರಮಾಣ ಪತ್ರ ನೀಡಿ. ಅಧ್ಯಕ್ಷರ ಆಯ್ಕೆಯ ದಿನಾಂಕ ನೀಡುವಂತೆ ಕೇಳಿರುವೆ. ಸಧ್ಯದಲ್ಲೇ ಅಧ್ಯಕ್ಷರ ಆಯ್ಕೆ ದಿನಾಂಕ ಪ್ರಕಟಿಸಲಿದೆ.
ಉಡೇದ ಬಸವರಾಜ್. ಅಧ್ಯಕ್ಷರು.ವೀ.ವಿ.ಸಂಘ ಬಳ್ಳಾರಿ.


ನಾನು ಯಾವುದಾದರೂ ಒಂದು ಗುಂಪಿಗೆ ಓಟು ಹಾಕುತ್ತೇನೆ. ಅಧಿಕಾರ ಇಲ್ಲದಿದ್ದರೂ ವಿರೋಧ ಪಕ್ಷದಲ್ಲಿದ್ದು ಸಂಘವನ್ನು ಸರಿದಾರಿಯಲ್ಲಿ ನಡೆಸುವ ಮಾರ್ಗದರ್ಶಕನಾಗುತ್ತೇನೆ. ಡಾ.ರಾಜಶೇಖರ ಮತ್ತು ನಾನು ಇಬ್ಬರು ಸೇರಿ ಸೂಕ್ತ ನೀರ್ಣಯ ತೆಗೆದುಕೊಳ್ಳುತ್ತೇವೆ.
ಮಹೇಶ್ವರಸ್ವಾಮಿ. ಹಿರಿಯ ಸದಸ್ಯರು. ವೀ.ವಿ.ಸಂಘ ಬಳ್ಳಾರಿ.