
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.22: ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ನಗರದ ವೀ.ವಿ. ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಅತ್ಯತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಗಂಗೋತ್ರಿ 600 ಕ್ಕೆ 585 ಅಂಕಗಳನ್ನು ಪಡೆದು ಬಳ್ಳಾರಿ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ ಹಾಗೆಯೇ ರವಿತೇಜ ಇವರು 600 ಕ್ಕೆ 584 ಅಂಕ ಪಡೆದು ಕಾಲೇಜಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ನಿಖಿತ ಇವರು 600 ಕ್ಕೆ 580 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ ವಾಣಿಜ್ಯ ವಿಭಾಗದಲ್ಲಿ ಅಮೃತ ಲಕ್ಷ್ಮೀ ಇವರು 600 ಕ್ಕೆ 583 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ ಕುಶಾಲ ಕುಮಾರ್ ಬುಟ್ಟಡ ಇವರು 600 ಕ್ಕೆ 572 ಅಂಕ ಪಡೆದು ಕಾಲೇಜಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ರಕ್ಷಿತಾರೆಡ್ಡಿ ಎ ಇವರು 600 ಕ್ಕೆ 559 ಅಂಕ ಪಡೆದು ಕಾಲೇಜಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಅತ್ಯತ್ತಮ ದರ್ಜೆಯಲ್ಲಿ 70 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗು 18 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೆಯೇ ವಾಣಿಜ್ಯ ವಿಭಾಗದಲ್ಲಿ 20 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿ 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ವಿಜ್ಞಾನ ವಿಭಾಗದಿಂದ ಶೇ 90.83 ರಷ್ಟು ಫಲಿತಾಂಶ ಬಂದರೆ ವಾಣಿಜ್ಯ ವಿಭಾಗದಿಂದ ಶೇ 84.95 ಫಲಿತಾಂಶ ಬಂದಿದೆ ಒಟ್ಟಾರೆ ಕಾಲೇಜಿನ ಫಲಿತಾಂಶ ಶೇ 88.26 .ಕಾಲೇಜಿನ ಹಾಗು ವಿದ್ಯಾರ್ಥಿಗಳ ಸಾಧನೆಗೆ ವೀ.ವಿ. ಸಂಘದ ಅಧ್ಯಕ್ಷರಾದ ಆರ್ ರಾಮನಗೌಡರು ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಗಳಾದ ಹೆಚ್ ಎಂ ಗುರುಸಿದ್ಧಸ್ವಾಮಿ, ಜಂಟಿ ಕಾರ್ಯದರ್ಶಿ ಜೆ. ಶಾಂತ ವೀರನಗೌಡರು, ಕೋಶಾಧಿಕಾರಿ ಶ್ರೀಗೋನಾಳು ರಾಜಶೇಖರ ಗೌಡರು, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಏಳುಬೆಂಚಿ ರಾಜಶೇಖರ ಗೌಡರು, ಆಡಳಿತ ಮಂಡಳಿ ಸದಸ್ಯರಾದ ಅಣ್ಣ ವಿರೂಪಾಕ್ಷಪ್ಪ, ಕೆ.ಮುದ್ದನಗೌಡರು, ಬಿ. ನಾಗರಾಜ, ಕಾಲೇಜಿನ ಪ್ರಾಚಾರ್ಯರಾದ ಡಾ ಕೆ ಎಂ ದೇವೇಂದ್ರಯ್ಯ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.