ವೀ.ವಿ.ಸಂಘದ ಚುನಾವಣೆ ಪ್ರಕಟ


* ಫೆ.17 ರಿಂದ ನಾಮಪತ್ರ ಸಲ್ಲಿಕೆ.
* ಫೆ 23 ನಾಮಪತ್ರ ಸಲ್ಲಿಸಲು ಕೊನೆಯ ದಿನ.
* ಫೆ‌. 24 ಪರಿಶೀಲನೆ.
*ಫೆ.26 ವರೆಗೆ ಹಿಂದಕ್ಕೆ ಪಡೆಯಬಹುದು. ಅಂದೇ ಸಂಜೆ ಉಮೇದುವಾರರ ಪಟ್ಟಿ ಪ್ರಕಟ.
* ಮಾ‌.17 ಮತದಾನ ಆರ್ ವೈ ಎಂಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ
* ಮಧ್ಯಾಹ್ನ 1 ರಿಂದ ಸಂಜೆ 6 ವರೆಗೆ ಮತದಾನ
* ಮಾ.18 ಮತಗಳ ಎಣಿಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.12: ಜಿಲ್ಲೆಯ ಪ್ರತಿಷ್ಠಿತ ‌ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘಕ್ಕೆ 2024-27 ನೇ ಸಾಲಿನ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ 30 ಸ್ಥಾನಗಳಿಗೆ ಚುನಾವಣೆಯ ಅಧಿಸೂಚನೆಯನ್ನು ಇಂದು ಮುಖ್ಯ ಚುನಾವಣಾ ಅಧಿಕಾರಿ ಎನ್.ಪಿ.ಲಿಂಗನಗೌಡ ಹೊರಡಿಸಿದ್ದಾರೆ.
ಫೆ.17 ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ನಡೆಯಲಿದೆ. ಫೆ 23 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಫೆ‌. 24 ಪರಿಶೀಲನೆ ನಡೆಯಲಿದೆ. ಫೆ.26 ವರೆಗೆ ಅಭ್ಯರ್ಥಿಗಳು ನಾಮ ಪತ್ರಗಳನ್ನು ಹಿಂದಕ್ಕೆ ಪಡೆಯಬಹುದು. ಅಂದೇ ಸಂಜೆ 6 ಕ್ಕೆ ಉಮೇದುವಾರರ ಪಟ್ಟಿ ಪ್ರಕಟಮಾಡಲಿದೆ.
ಮಾ‌.17 ರಂದು ಮತದಾನಕ್ಕೆ ಆರ್ ವೈ ಎಂಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಲಿದ್ದು‌ ಮಧ್ಯಾಹ್ನ 1 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ. ಮರುದಿನ  ಮಾ.18ರ ಬೆಳಿಗ್ಗೆ 9 ಗಂಟೆ ನಂತರ  ಮತಗಳ ಎಣಿಕೆ ಕಾರ್ಯ ಆರಂಭಗೊಂಡು ಎಣಿಕೆ ಮುಗಿದ ನಂತರ ಫಲಿತಾಂಶ ಪ್ರಕಟಿಸಲಿದೆಂದು ತಿಳಿಸಿದ್ದಾರೆ.