ವೀ.ವಿ.ಸಂಘದ ಚುನಾವಣೆಬಣಾಪುರ ಜಡಿಸಿದ್ದನಗೌಡರಿಂದ  ನಾಮಪತ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.19: ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯತ್ವದ ಚುನಾವಣೆ  ದಿ.ಅಲ್ಲಂ‌ಕರಿಬಸಪ್ಪ ಹಾಗು ಎನ್.ತಿಪ್ಪಣ್ಣನವರ ಹಿರಿಯರ ತಂಡದ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿ  ಇಂದು ಚುನಾವಣಾಧಿಕಾರಿಗಳಾದ ಲಿಂಗನಗೌಡ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಕುರುಗೋಡಿನ ಮಾಜಿ ಶಾಸಕರಾದ ಬಣಾಪುರ ಶಿವರಾಮರೆಡ್ಡಿ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಕಣಕ್ಕಿಳಿದಿದ್ದಾರೆ.
ಕೃಷಿಕ ಕುಟುಂಬದಿಂದ ಬಂದಿರುವ ಇವರು ಸಂಘದ ಹಾಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಣಾಪುರ ನಾಗಭೂಷಣಗೌಡ ಅವರ ಪುತ್ರರು. ಇವರು ಮೊದಲ ಬಾರಿಗೆ ಸಂಘದ ಚುನಾವಣೆಗೆ ಸ್ಪರ್ಧೆ ಮಾಡಿದ್ದು‌ ವೀರಶೈವ ತರುಣ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು. ಪ್ರಸ್ತುತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಉಪಾಧ್ಯಕ್ಷರಾಗಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ, ಸಂಘದ ಮಾಜಿ ಅಧ್ಯಕ್ಷ, ಉಡೇದ ಬಸವರಾಜ್, ಅಜೀವ್ ಸದಸ್ಯರಾದ ಅರವಿಂದ ಪಾಟೀಲ್, ಮೆಟ್ರಿ ಮೃತ್ಯುಂಜಯಪ್ಪ, ರಾಜಣ್ಣ, ಪಾಲಕ್ಷಿರೆಡ್ಡಿ, ಗೋನಾಳ್ ರಾಜಶೇಖರಗೌಡ, ಕೋಳೂರು ಮಲ್ಲಿಕಾರ್ಜುನಗೌ, ಅಂಗಡಿ ಪಂಪಾಪತಿ, ಪ್ರಭುಸ್ವಾಮಿ, ತುರುನೂರು ಚಂದ್ರಣ್ಣ, ಪಾರ್ವತೀಶ್  ಮೊದಲಾದವರು ಇದ್ದರು.