ವೀ.ವಿ. ಸಂಘದ ಚುನಾವಣೆನೀಲಕಂಠಪ್ಪ ನಾಮಪತ್ರ ಸಲ್ಲಿಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.19: ಮುಂದಿನ‌ ತಿಂಗಳು 17 ರಂದು ನಡೆಯುವ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ ನಗರ ಕ್ಷೇತ್ರದಿಂದ ಸ್ಪರ್ಧಿಗಳಾಗಿ ಜನತಾ ಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ ಅವರು ಇಂದು ಚುನಾವಣಾ ಅಧಿಕಾರಿ ಲಿಂಗನಗೌಡ ಅವರಿಗೆ ನಾಮ ಪತ್ರ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಕೆ.ಎಂ. ಕೊಟ್ರೇಶ್ ಎಲ್.ಐ.ಸಿ, ಹಾಗೂ ಕೆ.ಎಂ.ಸುರೇಶ್ ಸ್ವಾಮಿ  ಇದ್ದರು.
ಸಹಕಾರ ಕ್ಷೇತ್ರದಲ್ಲಿ ಈಗಾಗಲೇ ಹಲವು ದಶಕಗಳಿಂದ ಸೇವೆ ಸಲ್ಲಿಸಿರುವ ನನಗೆ ಸಂಘದ ಆಜೀವ ಸದಸ್ಯರು ಶೈಕ್ಷಣಿಕ ಸೇವೆಗೆ ಆಶೀರ್ವಾದ ನೀಡಬೇಕೆಂದು ಕೋರಿದರು.