ವೀ ವಿ ಸಂಘದ ಎನ್ ಎಂ ಸ್ವತಂತ್ರ ಪ.ಪೂ ಕಾಲೇಜಿಗೆ ಉತ್ತಮ ಫಲಿತಾಂಶ.


ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.15:  ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ವೀ. ವಿ. ಸಂಘದ ಎನ್ ಎಂ ಸ್ವತಂತ್ರ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ವಿಜ್ಞಾನ ವಿಭಾಗದ ವಿದ್ಯಾರ್ಥಿ ಟಿ. ಎಂ. ಕಿರಣ್ ಕುಮಾರ್ 600 ಕ್ಕೆ 580 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಹಾಗೆಯೇ ಸುಹಾಸ್ .ಜಿ ಇವರು 600 ಕ್ಕೆ 575 ಅಂಕ ಪಡೆದು ಕಾಲೇಜಿಗೆ ಎರಡನೇ ಸ್ಥಾನ ಪಡೆದಿದ್ದಾರೆ,  ಸಿ. ಸೃಜನ ಶ್ರೀ ಇವರು 600 ಕ್ಕೆ 572 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ ವಾಣಿಜ್ಯ ವಿಭಾಗದಲ್ಲಿ ಕು. ಎ. ಸ್ನೇಹಾ ಇವರು 600 ಕ್ಕೆ 584 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ ಕು ಬಿ. ಕೀರ್ತನ  ಇವರು 600 ಕ್ಕೆ 580 ಅಂಕ ಪಡೆದು ಕಾಲೇಜಿಗೆ ಎರಡನೇ ಸ್ಥಾನ ಪಡೆದಿದ್ದಾರೆ ಕು. ಅಕ್ಷತಾ ತುರಾಯಿ. ಎಂ. ಇವರು 600 ಕ್ಕೆ 564 ಅಂಕ ಪಡೆದು  ಕಾಲೇಜಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 24 ವಿದ್ಯಾರ್ಥಿಗಳು ಅತ್ಯತ್ತಮ ದರ್ಜೆಯಲ್ಲಿ 46 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೆಯೇ ವಾಣಿಜ್ಯ ವಿಭಾಗದಲ್ಲಿ 14  ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿ  20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ  ವಿಜ್ಞಾನ ವಿಭಾಗದಿಂದ ಶೇ 94.83 ರಷ್ಟು ಫಲಿತಾಂಶ  ಬಂದರೆ ವಾಣಿಜ್ಯ ವಿಭಾಗದಿಂದ ಶೇ 84.00 ಫಲಿತಾಂಶ ಬಂದಿದೆ ಒಟ್ಟಾರೆ ಕಾಲೇಜಿನ  ಫಲಿತಾಂಶ ಶೇ 90.00 ಆಗಿದೆ. ವಿದ್ಯಾರ್ಥಿಗಳ  ಸಾಧನೆಯನ್ನು ವೀ. ವಿ. ಸಂಘದ ಅಧ್ಯಕ್ಷ ಅಲ್ಲಂ ಗುರು ಬಸವರಾಜ, ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ,  ಕಾರ್ಯದರ್ಶಿ  ಡಾ. ಅರವಿಂದ ಪಾಟೀಲ್, ಜಂಟಿ ಕಾರ್ಯದರ್ಶಿ  ಮೇಟಿ ಪೊಂಪನಗೌಡ, ಕೋಶಾಧಿಕಾರಿ ಬೈಲುವದ್ದಿಗೇರಿ ಎರ್ರಿಸ್ವಾಮಿ ಕಾರ್ಯಕಾರಿ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎಂ.ದೇವೇಂದ್ರಯ್ಯ ಮತ್ತು ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.