ವೀ.ವಿ.ಸಂಘದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ನಾಗೇಂದ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಸಮಾಜದಲ್ಲಿ ಹೇಗೆ ಬಾಳಬೇಕು ಬದುಕಬೇಕು ಎಂಬುದನ್ನು ಈ ಶಿಕ್ಷಣ ಸಂಸ್ಥೆ ಕಲಿಸಿದೆ. ಸಂಘದ ಯಾವುದೇ ಕೆಲಸ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.ಅವರು ಇಂದು ನಗರದ ವೀರಶೈವ ವಿದ್ಯಾವರ್ಧಕ ಸಂಘದಿಂದ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ದಾನಿಗಳು‌ ನೀಡಿದ 26 ಸಾವಿರ ರೂಗಳಿಂದ ಆರಂಭಗೊಂಡ ಈ ಸಂಘ ಇಂದು ಸಾವಿರಾರು ಕೋಟಿ ಆಸ್ತಿಯಾಗಿ ಬೆಳೆದಿದೆ. ಶೈಕ್ಷಣಿಕ ಸಂಸ್ಥೆಗಳನ್ನು ಬೆಳಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.ನಾನು ಈ ವೇದಿಕೆಯಲ್ಲಿ ನಿಂತು ಮಾಡವ ಬುದ್ದಿಶಕ್ತಿಯನ್ನು ನೀಡಿದ್ದು ಈ ಸಂಘ ಕಾರಣ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ನಮ್ಮ ತಂದೆಯವರು, ಸಹೋದರರು ಸಹ ಈ ಸಂಘದ ಕಾಲೇಜಿನಲ್ಲಿಯೇ ಓದಿದ್ದರು ನಮ್ಮಂತಹ ಸಾವಿರಾರು ಜನತೆಗೆ ಶಿಕ್ಷಣ ನೀಡಿ ದೇಶದ ಪ್ರಗತಿಗೆ ಕಾರಣವಾಗಿದೆಂದರು.ಲಾಸ್ಟ್ ಬೆಂಚ್ ವಿದ್ಯಾರ್ಥಿಗಳ ಯಶಸ್ಸು ಎಂದರೆ ರಾಜಕೀಯ ಕ್ಷೇತ್ರ. ನಾನು ಲಾಸ್ಟ್ ಬೆಂಚ್ ಸ್ಟೂಡೆಂಟ್ ಎಂದು ಗಮನ ಸೆಳೆದರು.ಸಂಘದ ಕಾರ್ಯದರ್ಶಿ ಹೆಚ್.ಎಂ.ಗುರುಸಿದ್ದಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಇತಿಹಾಸ ತಿಳಿಸಿದರು.ಸಚಿವ ನಾಗೇಂದ್ರ ಅವರು ನಮ್ಮ ಸಂಘದ ವೀರಶೈವ ಕಾಲೇಜಿನ ವಿದ್ಯಾರ್ಥಿಯಾಗಿದ್ದರೆಂದರು.ವೀರಶೈವ ಸಮಾಜ ಎಲ್ಲಾ ಸಮುದಾಯದ ಜನತೆ ವಿದ್ಯಾವಂತರಾಗಬೇಕೆಂದು ಶಾಲಾ ಕಾಲೇಜು ಆರಂಭಿಸಿ ಇಂದು 50 ಶಾಲಾ ಕಾಲೇಜುಗಳ ಮೂಲಕ ಸವಿರಾರು ವಿದ್ಯಾರ್ಥಿಗಳ ಶಿಕ್ಷಣ ಪಡೆಯುತ್ತಿದ್ದಾರೆಂದರು.ನಮ್ಮ ಶಿಕ್ಷಣ ಸಂಸ್ಥೆಗೆ ತೆರಿಗೆ ರಿಯಾಯ್ತಿ ಇದೆ. ಆದರೂ ಪಾಲಿಕೆಯವರು ಆಸ್ತಿ ತೆರಿಗೆ ಕಟ್ಟಿ ಎಂದು ಪಾಲಿಕೆ ಅಧಿಕಾರಿಗಳು ಬಂದು ಕಿರಿ ಕಿರಿ ಮಾಡ್ತಿದ್ದಾರೆ. ಅವರಿಗೆ ಮನವರಿಕೆ ಮಾಡಿ. ಬಸವೇಶ್ವರ ನಗರದ 16 ಎಕರೆಯ ಸಂಘದ ನಿವೇಶನದಲ್ಲಿ ಒಳಚರಂಡಿ ಇದೆ. ಅದನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ಮೇಯರ್ ಅವರಿಗೆ ಮನವಿ ಮಾಡಿದರು.ಮೇಯರ್ ತ್ರಿವೇಣಿ, ಉಪ ಮೇಯರ್ ಜಾನಕಿ ಅವರನ್ನು ಸಹ ಸಂಘದಿಂದ ಸನ್ಮಾನಿಸಿ ಗೌರವಿಸಲಾಯ್ತು.ಉಪ ಮೇಯೆ್ ಜಾನಕಿ‌ಮಾತನಾಡಿ ನಾನು ಅಲ್ಲಂಸುಂಮಗಳಮ್ಮ‌ಕಾಲೇಜಿನಲ್ಲಿ ಪಿಯು, ವೀರಶೈವ ಕಾಲೇಜಿನಲ್ಲಿ ಬಿಎಸ್ಸಿ ಅಭ್ಯಾಸ ಮಾಡಿದ್ದು. ಇಂತಹ ಸ್ಥಳದಲ್ಲಿ ಗೌರವ ಸನ್ಮಾನ ಸ್ವೀಕರಿಸಿದ್ದು ಖುಷಿ ತಂದಿದ್ದು ಎಂದರು.ಸಂಘದ ಅಧ್ಯಕ್ಷ ಆರ್.ರಾಮನಗೌಡ ಅಧ್ಯಕ್ಷತೆವಹಿಸಿದ್ದರು.ಸಮಾರಂಭದಲ್ಲಿ ಸಂಘದ ಖಜಾಂಚಿ ಗೋನಾಳ್ ರಾಜಶೇಖರಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಲ್ಲಂ, ಬಸವರಾಜ್, ಕೆ.ಎಂ.ಮಹೇಶ್ವರಸ್ವಾಮಿ, ಹಾವಿನಾಳ್ ಶರಣಪ್ಪ, ಜಾನೆಕುಂಟೆ ಬಸವರಾಜ್ ಕುಮ್ಮಿ, ಹೆಚ್.ಎಂ.ಕಿರಣ್ ಕುಮಾರ್, ಎಸ್.ಮಲ್ಲನಗೌಡ, ಯಾಳ್ಪಿ ಮೇಟಿ ಪಂಪನಗೌಡ, ಕಾತ್ಯಾಯಿನಿ‌ಮರಿದೇವಯ್ಯ, ಬಾದಮಿ ಕರಿಬಸವನಗೌ, ವದ್ದಿಗೇರಿ ಎರ್ರಿಸ್ವಾಮಿ, ಡಾ. ಎಸ್.ಬಿ.ರಾಜಶೇಖರ್ ಮೊದಲಾದವರು ಇದ್ದರು.ಗಂಧರ್ವ ಸಂಗೀತ ವಿದ್ಯಾಲಯದ ನಾಗಭೂಷಣ ಬಾಪುರೆ ಮತ್ತವರ ತಂಡದಿಂದ ಪ್ರಾರ್ಥನೆ. ಸಹ ಕಾರ್ಯದರ್ಶಿ ದರೂರು ಶಾಂತನಗೌಡ ವಂದನಾರ್ಪಣೆ ಮಾಡಿದರು.